ಸಹಕಾರಿ ಕ್ಷೇತ್ರದ ಬ್ಯಾಂಕ್‍ಗಳ ಪರಿಪೂರ್ಣ ಬೆಳವಣಿಗೆಗೆ ದಕ್ಷತೆ ಮತ್ತು ಪ್ರಾಮಾಣಿಕತೆ ಮುಖ್ಯ

0
8

ಚಳ್ಳಕೆರೆ

           ಸಹಕಾರ ಕ್ಷೇತ್ರಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಹೆಚ್ಚಿದಷ್ಟು ಆ ಕ್ಷೇತ್ರ ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕಳೆದ ನೂರಾರು ವರ್ಷಗಳಿಂದ ರಾಜ್ಯದಲ್ಲಿಹಲವಾರು ಸಹಕಾರ ಬ್ಯಾಂಕ್‍ಗಳು ಎಲ್ಲಾ ಸಮುದಾಯದ ಅಭ್ಯುದಯಕ್ಕೆ ತಮ್ಮದೇಯಾದ ರೀತಿಯಲ್ಲಿ ಸೇವೆ ಸಲ್ಲಿಸಿದೆ. ತಾಲ್ಲೂಕಿನಲ್ಲಿ ಕಳೆದ 76 ವರ್ಷಗಳಿಂದ ಇಲ್ಲಿನ ಜನತೆಯ ಆರ್ಥಿಕ ಸಂಕಷ್ಟಗಳಿಗೆ ಚಳ್ಳಕೆರೆ ಟೌನ್ ಬಳಕೆದಾರರ ಹಾಗೂ ಪತ್ತಿನ ಸಹಕಾರ ಸಂಘ ಉತ್ತಮ ಸಹಕಾರ ನೀಡಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಎಂ.ಸಂಜೀವಪ್ಪ(ರಾಜಣ್ಣ) ತಿಳಿಸಿದರು.
              ಅವರು, ಶನಿವಾರ ಬ್ಯಾಂಕ್‍ನ ಆವರಣದಲ್ಲಿ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇಲ್ಕಂಡ ಆರ್ಥಿಕ ವರ್ಷದಲ್ಲಿ ನಮ್ಮ ಬ್ಯಾಂಕ್ ಎಲ್ಲಾ ರೀತಿಯ ವ್ಯವಹಾರಗಳಿಗೆ ಸಹಕಾರ ನೀಡುತ್ತಾ ಬಂದಿದೆ. ವಿಶೇಷವಾಗಿ ಬಡ ಜನತೆಗೆ ಅವಶ್ಯವಿರುವ ಸಣ್ಣ ಮೊತ್ತದ ಸಾಲಗಳನ್ನು ನೀಡುವ ಮೂಲಕ ದುರ್ಬಲ ವರ್ಗದ ಜನರ ಆರ್ಥಿಕ ಸಂಕಷ್ಟಕ್ಕೆ ಸಹಾಯ ನೀಡಿದೆ ಎಂದರು. ಈ ಸಾಲಿನಲ್ಲಿ 2.40 ಲಕ್ಷ ಲಾಭವನ್ನು ಗಳಿಸಿದ್ದು, ಪ್ರತಿಯೊಬ್ಬ ಶೇರುದಾರರಿಗೂ ಶೇ.10ರಷ್ಟು ಲಾಭಾಂಶ ನೀಡಲಾಗುವುದು.
              ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ವಿ.ತ್ಯಾಗರಾಜು, ಹಿರಿಯ ಸಹಕಾರಿ ದುರೀಣರಾದ ಕೋಟೆ ಬಸವರಾಜು, ವಿಜಯಕುಮಾರ್, ಕೋಟೆಜಯಣ್ಣ, ಬೋರಣ್ಣ, ಕರಿಯಣ್ಣ, ಎಂ.ಎನ್.ಮೃತ್ಯುಂಜಯ, ಪ್ರಸಾದ್ ಮುಂತಾದವರು ಬ್ಯಾಂಕ್‍ನ ಉತ್ತಮ ವ್ಯವಹಾರಗಳನ್ನು ಪ್ರಶಂಸಿಸಿದರು.
             ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‍ನ ಹಿರಿಯ ನಿರ್ದೇಶಕರಾದ ಶ್ರೀನಿವಾಸ್‍ರಾಜು, ಎ.ವೀರಣ್ಣ, ಉಪಾಧ್ಯಕ್ಷ ಕೋಟೆ ಚಂದ್ರಶೇಖರ್, ಆದಿಭಾಸ್ಕರಶೆಟ್ಟಿ, ದೊಡ್ಡಲಿಂಗಾಚಾರ್, ಜಿ.ಬಿ.ಮಂಜುನಾಥ ಮುಂತಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಕೆ.ಎಸ್.ರಾಘವೇಂದ್ರ ಸ್ವಾಗತಿಸಿದರು, ವ್ಯವಸ್ಥಾಪಕ ನಜೀಮ್ ವಂದಿಸಿದರು, ಬ್ಯಾಂಕ್‍ನ ಸಿಬ್ಬಂದಿಯವರಾದ ಮಂಜುನಾಥ, ತಿಪ್ಪೇರುದ್ರ, ಎಂ.ರಘುನಾಗ ಕಾರ್ಯಕ್ರಮದಲ್ಲಿ ಇದ್ದರು.

LEAVE A REPLY

Please enter your comment!
Please enter your name here