ಸಿಂಗಾಪೂರ:
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತ ಅನುಭವಿ ಶಟ್ಲರ್ ಪಿ.ವಿ. ಸಿಂಧು ಅವರು ಪ್ರಸಕ್ತ ಸಾಲಿನ ಸಿಂಗಾಪೂರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಜಪಾನಿನ ನೊಜೊಮಿ ಓಕುರಾ ಎದುರು ಸೆಮಿಫೈನಲ್ನಲ್ಲಿ ಸೋಲಿಗೆ ಶರಣಾದರು.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಮ ನಾಲ್ಕರ ಘಟ್ಟದ 110 ನಿಮಿಷಗಳ ಹೋರಾಟದಲ್ಲಿ ಜಪಾನ್‌ನ ನೊಜೊಮಿ ಒಕುಹರ ವಿರುದ್ಧ ಮೊದಲ ಸೆಟ್ನಲ್ಲಿ ಉತ್ತಮ ಆಟವಾಡಲು ಯತ್ನಿಸಿದ ಆಂಧ್ರ ಬೆಡಗಿ ಕೊನೆಯಲ್ಲಿ 14 ಅಂಕಗಳಿಂದ ಹಿನ್ನಡೆಯಾದರು. ಎರಡನೇ ಸೆಟ್ನಲ್ಲಿ ಸಿಂಧು ತಮ್ಮ ಆಟದಲ್ಲಿ ಕೊಂಚ ಸುಧಾರಣೆ ಕಂಡರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 10 ಅಂತರದಿಂದ ಹಿನ್ನಡೆಯಾಗಿ ಪರಾಭವಗೊಂಡು ನಿರಾಸೆಗೊಳಗಾದರು.
ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧೂ ಈ ಸಾಲಿನಲ್ಲಿ ಎರಡನೇ ಬಾರಿಗೆ ನಾಲ್ಕರ ಘಟ್ಟ ತಲುಪಿದ್ದರು. ಆದರೆ ಜಪಾನ್ ಪ್ರತಿಸ್ಪರ್ಧಿಯ ವಿರುದ್ಧ ಸಿಂಧೂ ಆಟ ನಡೆಯಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
