ನವದೆಹಲಿ:
ಶನಿವಾರ ಮಣಿಪುರಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯೋಗದ ಭೇಟಿಯನ್ನು ಸ್ವಾಗತಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಲು ತೆರಳಿರುವ ಆರು ನ್ಯಾಯಾಧೀಶರನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು. ಕಳೆದ 22 ತಿಂಗಳುಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ, ಸುಮಾರು 60,000 ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನರು ಆಶ್ರಯ ತಾಣಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 13 ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು, ಆದರೆ ಕೆಲ ಪ್ರಶ್ನೆ ಉದ್ಭವಿಸುತ್ತದೆ, ಆಗಸ್ಟ್ 1, 2023 ರಂದು ಸುಪ್ರೀಂ ಕೋರ್ಟ್ ಸ್ವತಃ ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂದು ಹೇಳಿದ ನಂತರವೂ, ರಾಷ್ಟ್ರಪತಿ ಆಳ್ವಿಕೆ ಹೇರಲು 18 ತಿಂಗಳುಗಳು ಏಕೆ ಬೇಕಾಯಿತು? ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೋಗಿರುವುದು ಒಳ್ಳೆಯದು, ಆದರೆ ದೊಡ್ಡ ಪ್ರಶ್ನೆಯೆಂದರೆ ಪ್ರಧಾನಿ ಯಾವಾಗ ಭೇಟಿ ನೀಡುತ್ತಾರೆ? ರಮೇಶ್ ಕೇಳಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯೋಗವು ಶನಿವಾರ ಮಣಿಪುರದ ಚುರಾಚಂದಪುರದಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ವಿಕ್ರಮ್ ನಾಥ್, ಎಂ.ಎಂ. ಸುಂದ್ರೇಶ್, ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಅವರ ನಿಯೋಗ ಮಣಿಪುರಕ್ಕೆ ಆಗಮಿಸಿದೆ.
ಸಂಸತ್ತಿನಲ್ಲಿ ತಮ್ಮ ಸಚಿವಾಲಯದ ಕಾರ್ಯಗಳ ಕುರಿತು ಚರ್ಚೆಯ ಸಮಯದಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಮಾತನಾಡದ ಗೃಹ ಸಚಿವ ಅಮಿತ್ ಶಾ ಅವರನ್ನೂ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ನಿನ್ನೆ, ಗೃಹ ಸಚಿವರು ತಮ್ಮ ಗೃಹ ಸಚಿವಾಲಯದ ಕೆಲಸದ ಬಗ್ಗೆ ರಾಜ್ಯಸಭೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಷಣ ಮಾಡಿದ್ದಾರೆ. ಆದರೆ ಅವರು ಮಣಿಪುರದ ಬಗ್ಗೆ ಮಾತನಾಡಲಿಲ್ಲ. ಫೆಬ್ರವರಿ 2022 ರಲ್ಲಿ, NDA ಭಾರಿ ಬಹುಮತದೊಂದಿಗೆ ಚುನಾವಣೆಯನ್ನು ಗೆದ್ದಿತು, ಆದರೆ 15 ತಿಂಗಳೊಳಗೆ ಮಣಿಪುರ ಹೊತ್ತಿ ಉರಿಯಲು ಪ್ರಾರಂಭಿಸಿತು. ಅದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿನ ವಿಳಂಬವನ್ನು ರಮೇಶ್ ಪ್ರಶ್ನಿಸಿದರು, ಶಾ ಮಣಿಪುರಕ್ಕೆ ಭೇಟಿ ನೀಡದೆ ಮಿಜೋರಾಂಗೆ ಭೇಟಿ ನೀಡಿದ್ದಕ್ಕಾಗಿ ಟೀಕಿಸಿದರು. ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿ ಇಷ್ಟೊಂದು ವಿಳಂಬ ಏಕೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಗೃಹ ಸಚಿವರು ಮಿಜೋರಾಂಗೆ ಹೋಗುತ್ತಾರೆ, ಮಣಿಪುರಕ್ಕೆ ಏಕೆ ಹೋಗಲಿಲ್ಲ? ಮತ್ತು ಅಮೆರಿಕಕ್ಕೆ ಹೋದ ನಂತರ ಮಿಜೋರಾಂ ಮುಖ್ಯಮಂತ್ರಿ ಹೇಳಿರುವ ವಿಷಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಅವರು ಹೇಳಿದ್ದಾರೆ. ಬಾಂಕ್ಯಾಕ್‌ಗೆ ಹೋಗುವ ಮೊದಲು ಅಥವಾ ಅಲ್ಲಿಂದ ಹಿಂದಿರುಗಿದ ನಂತರ ಪ್ರಧಾನಿ ಮೋದಿ ಒಮ್ಮೆ ಮಣಿಪುರಕ್ಕೆ ಭೇಟಿ ಎಂದು ಮನವಿ ಮಾಡಿದ್ದಾರೆ.
