ಹೊಳಲ್ಕೆರೆ
ಸ್ವ ಉದ್ಯೋಗದಿಂದ ಮಾತ್ರ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಅಡ್ಮಿನಿಷ್ಟೇಟರ್ ಆಂಡ್ರೀವ್ಸ್ ತಿಳಿಸಿದರು.
ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ಚೈಲ್ಡ್ ಕೇರ್ ಸಂಸ್ಥೆ ಹಮ್ಮಿಕೊಂಡಿದ್ದ ಯುವತಿಯರು, ಮಹಿಳೆಯರಿಗೆ ಸ್ವ ಉದ್ಯೋಗ ಮೇಳ ಹಾಗೂ ಮಹಿಳೆಯರು ತಯಾರಿಸಿದ ವಸ್ತುಗಳು, ಉಡುಪುಗಳ ಪ್ರದರ್ಶನ ಮೇಳದಲ್ಲಿ ಮಾತನಾಡಿದರು. ನಮ್ಮ ಸಂಸ್ಥೆ ಗ್ರಾಮೀಣ ಪ್ರದೇಶದ ಯುವತಿಯರಿಗೆ ಸ್ವ ಉದ್ಯೋಗ ಕಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತಿದ್ದು, ಈಗಾಗಲೇ ಸಾಕಷ್ಟು ಹಳ್ಳಿಗಳಲ್ಲಿ ಟೈಲರಿಂಗ್, ತೆಂಗಿನ ನಾರಿನಲ್ಲಿ ತಯಾರಿಸಬಹುದಾದ ಉಪಕರಣಗಳು, ಅಡಿಕೆ ತಟ್ಟೆಗಳು, ವಿವಿಧ ರೀತಿಯ ಗಿಪ್ಟ್ ಐಟಂಗಳು ಸೇರಿದಂತೆ ಅನೇಕ ರೀತಿಯ ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಸ್ತುಗಳನ್ನು ತಯಾರಿಸುವುದನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ ಎಂದರು
ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಕೋ ಆರ್ಡಿನೇಟರ್ ರಮೇಶ್ ಮಾತನಾಡಿ, ಇಂದಿನ ಯುವ ಸಮುದಾಯ ಸರಕಾರಿ ನೌಕರಿಯನ್ನ ನೆಚ್ಚಿಕೊಳ್ಳದೆ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು. ಯುವತಿಯರು, ಮಹಿಳೆಯರು ಸ್ವ ಉದ್ಯೋಗಗಳನ್ನು ಕಲಿತು, ಆ ಮೂಲಕ ಆರ್ಥಿಕವಾಗಿ ಸದೃಡರಾಗಬೇಕು ಎಂದರು.
ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯ ಬೆಂಗಳೂರು ವಿಭಾಗದ ಶಶಿಕಲಾ, ಪ್ರಾಜೆಕ್ಟ್ ಆಫೀಸರ್ ಬೃಂದ, ಪ್ರಾಜೆಕ್ಟ್ ಕೋ ಆರ್ಡಿನೇಟರ್ ಹೊನ್ನಪ್ಪ, ಅಂಗನಾಡಿ ಕಾರ್ಯಕರ್ತೇ ಲಲಿತಮ್ಮ, ಚೈಲ್ಡ್ ಪಂಡ್ ಕಾಮದೇನು ಯೂಥ್ ಕ್ಲಬ್ ಅಧ್ಯಕ್ಷೆ ರಂಜಿತಾ, ಕ್ಲಬ್ ಸದಸ್ಯರಾದ ಟಿ.ಅನುಷಾ, ಭವ್ಯ, ದಿವ್ಯಾ, ನೀಲಾ, ಸ್ವಾತಿ, ನಿವೇಧಿತಾ, ಪೂಜಾ, ಪ್ರತಿಭಾ ಮತ್ತಿತರರಿದ್ದರು.
ತುಪ್ಪದಹಳ್ಳಿ ಹಾಗೂ ಸಿಂಗೇನಹಳ್ಳಿ ಗ್ರಾಮದ ಯುವತಿಯರು ತಾವು ಪಡೆದ ತರಬೇತಿಯಿಂದ ತಯಾರಿಸಿದ ಸಿದ್ದ ಉಡುಪುಗಳು, ಗಿಪ್ಟ್ ಐಟಂಗಳು, ತೆಂಗಿನ ನಾರಿನಿಂದ ತಯಾರಿಸಿದ ವಸ್ತುಗಳು, ಅಡಿಕೆ ಪಟ್ಟೆಯಿಂದ ತಯಾರಿಸಿದ ತಟ್ಟೆ ಹಾಗೂ ವಿವಿಧ ರೀತಿಯ ವಸ್ತುಗಳ ಪ್ರದರ್ಶನ ಮಾಡಲಾಯಿತು.