ಹಾವೇರಿ :
ಜಿಲ್ಲೆಯ ಸವಣೂರ ತಾಲೂಕಿನ ಹೊಸಹಲಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ 2018-19 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ದಿ,12 ರಂದು ಸರ್ಕಾರದ , ಶಿಕ್ಷಣ ಇಲಾಖೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಊರ ನಾಗರಿಕರ ಸಹಕಾರದಿಂದ ಅದ್ಧೂರಿಯಾಗಿ ಜರುಗಲಿದೆ. ದಿ,12 ರಂದು ಬೆಳಿಗ್ಗೆ ಮಹಾಸರಸ್ವತಿ ಪೂಜೆ.ಮಧ್ಯಾಹ್ನ ವಿಜ್ಞಾನ ದಿನಾಚಾರಣೆ.ಸಾಯಂಕಾಲ 4 ಘಂಟೆಗೆ 7 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವಿದೆ.
ಸಂಜೆ 5 ಘಂಟೆಗೆ ಸಭಾ ಕಾರ್ಯಕ್ರಮ ಜರುಗುವುದು. ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ ಗೌರವ ಉಪಸ್ಥಿತರಿರುವರು. ಶಾಸಕ ಬಸವರಾಜ ಬೊಮ್ಮಯಿ ಉದ್ಘಾಟನೆ ಮಾಡಲಿರುವರು.ಜಿಲ್ಲಾಧಿಕಾರಿಗಳಾದ ಡಾ|| ವೆಂಕಟೇಶ್ ಎಂವ್ಹಿ ಜ್ಯೋತಿ ಬೆಳಗಿಸುವರು. ಉಪಸ್ಥಿತಿ ಜಿ.ಪಂ ಸಿಇಓ ಶ್ರೀಮತಿ ಕೆ.ಲಿಲಾವತಿ. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಸುರೇಶ ಶಿ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ಗಣ್ಯತಿಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಇದೇ ಅವಧಿಯಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನಿಸಲಾಗುವುದು. ನಂತರ ಮಕ್ಕಳಿಂದ ಸಂಸ್ಕತಿಕ ಕಲಾ ,ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಅಧಿಕಾರಿ ವೃಂದದವರು,ಶಿಕ್ಷಣ ಪ್ರೇಮಿಗಳು,ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು,ಹಾಲಿ, ಮಾಜಿ ವಿದ್ಯಾರ್ಥಿಗಳು. ಪಾಲಕ- ಪೋಷಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಲೆಯ ಪ್ರಧಾನ ಗುರುಗಳಾದ ಎಸ್.ಸಿ ದೊಡ್ಡಮನಿ ಪ್ರಕಟಣೆ ಕೋರಿದ್ದಾರೆ.