ಹದಗೆಟ್ಟ ವಿನೋದ್ ಕಾಂಬ್ಳಿ ಆರೋಗ್ಯ….!

ಮುಂಬಯಿ: 

    ಭಾರತದ ತಂಡ ಮಾಜಿ ಎಡಗೈ ಬ್ಯಾಟರ್​ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವರು ನಡೆಯುವುದಕ್ಕೂ ಕಷ್ಟಪಡುತ್ತಿದ್ದಾರೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿದ ಅಭಿಮಾನಿಗಳು ಅವರಿಗೆ ನಡಯಲು ನೆರವಾದ ಘಟನೆ ನಡೆದಿದೆ. ಆ ವಿಡಿಯೊವೊಂದು ವೈರಲ್ ಆಗಿದ್ದು ಅವರ ಪರಿಸ್ಥಿತಿಗೆ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ.

    ಪ್ರಸ್ತುತ ವಿನೋದ್‌ ಕಾಂಬ್ಳಿ ಅವರ ಆರ್ಥಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಇದರ ನಡುವೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಂಬ್ಳಿ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ವಿನೋದ್‌ ಕಾಂಬ್ಳಿ ಅವರು ನಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ನಡೆಯಲಾಗದೆ ಬೈಕ್‌ನ ಸಹಾಯದಿಂದ ನಿಂತು ಕೊಳ್ಳಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಕೆಲವರು, ಅವರ ಎರಡೂ ಕೈಗಳನ್ನು ಹಿಡಿದು ನಡೆಯಲು ಸಹಾಯ ಮಾಡಿದರು.

    ಈ ವಿಡಿಯೋ ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ವಿನೋದ್‌ ಕಾಂಬ್ಳಿ ಅವರು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂಬುದು ಸುಳ್ಳಲ್ಲ. ಇದರ ನಡುವೆ ವಿನೋದ್‌ ಕಾಂಬ್ಳಿ ಅವರು ಮದ್ಯ ವ್ಯಸನಿಯಾಗಿದ್ದಾರೆ. ಇದರಿಂದ ಅವರ ಜೀವನಕ್ಕೆ ಸಾಕಷ್ಟು ಹಿನ್ನಡೆಯಾಗಿದೆ ಎಂದ ಕೆಲವರು ಕಮೆಂಟ್ ಮಾಡಿದ್ದಾರೆ. ವಿನೋದ್‌ ಕಾಂಬ್ಳಿ ಅವರು 2013ರಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಕಳೆದ ವರ್ಷಗಳಲ್ಲಿ ಅವರು ಕೆಲ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದರು. 2023ರಲ್ಲಿ ವಿನೋದ್‌ ಕಾಂಬ್ಳಿ ಅವರು ತಮ್ಮ ಪತ್ನಿ ಆಂಡ್ರಿಯಾ ಅವರಿಂದ ದೂರವಾಗಿದ್ದರು. ಪತ್ನಿ ಕಾಂಬ್ಳಿ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು.

    ವಿನೋದ್‌ ಕಾಂಬ್ಳಿ ಹಾಗೂ ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಇಬ್ಬರೂ ಬಾಲ್ಯದ ಗೆಳೆಯರು. ಶಾಲಾ ಕ್ರಿಕೆಟ್‌, ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಅನ್ನು ಜೊತೆಯಾಗಿ ಆರಂಭಿಸಿದ್ದ ಇವರಿಬ್ಬರೂ ಅದ್ಭುತ ಆರಂಭ ಪಡೆದಿದ್ದರು. ಆದರೆ, ಸಚಿನ್‌ ತೆಂಡೂಲ್ಕರ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದರೆ, ವಿನೋದ್‌ ಕಾಂಬ್ಳಿ ಕಾರಣಾಂತರಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ.

Recent Articles

spot_img

Related Stories

Share via
Copy link
Powered by Social Snap