ನವದೆಹಲಿ:
ಹಿರಿಯ ಪತ್ರಕರ್ತ ಹಾಗೂ ಕುಲದೀಪ್ ನಯ್ಯರ್(95) ನಿನ್ನೆ(ಬುಧವಾರ) ತಡರಾತ್ರಿ ದೆಹಲಿಯ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರಾಗಿದ್ದ ನಯ್ಯರ್ 1997ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ 1990ರಲ್ಲಿ ಗ್ರೇಟ್ ಬ್ರಿಟನ್ ದೇಶಕ್ಕೆ ಹೈ ಕಮಿಶನರ್ ಆಗಿ ನೇಮಕ ಗೊಂಡಿದ್ದರು.
ಕುಲದೀಪ್ ನಯ್ಯರ್ ಅವರ ಅಂಕಣಗಳು 14 ಭಾಷೆಗಳಲ್ಲಿ ಸುಮಾರು 80 ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
