ಹೊಸ ಕಥೆಯೊಂದನ್ನು ಹೊತ್ತು ತರಲಿದ್ದಾರೆ ಅನಂತ್ ನಾಗ್

0
26

ಬೆಂಗಳೂರು (ಡಿ.10): ಅನಂತ್ ನಾಗ್ ಅದ್ಭುತ ಕಥೆಯೊಂದನ್ನ ಒಪ್ಪಿದ್ದಾರೆ. ಆ ಕಥೆಯ ಪ್ರಮುಖ ಪಾತ್ರವನ್ನೂ ಈಗಾಗಲೇ ಅಭಿನಯಿಸಿದ್ದಾರೆ.

ಿಶ್ವದ ಅತಿ ಎತ್ತರದ ಜಾಗ ದುಬೈನ ಬುರ್ಜ್ ಕಲೀಫಾದಲ್ಲೂ ಈ ಚಿತ್ರವನ್ನ ಚಿತ್ರೀಕರಿಸಲಾಗಿದೆ. ಬುರ್ಜ ಕಲೀಫಾದ 80 ನೇ ಅಂತಸ್ತಿನಲ್ಲಿ ಚಿತ್ರೀಕರಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆನೂ ಈ ಚಿತ್ರಕ್ಕೇನೆ ಸಲ್ಲಬೇಕು.ರಂಗಿತರಂಗ ಚಿತ್ರ ಖ್ಯಾತಿಯ ನಟಿ ರಾಧಿಕಾ ಚೇತನ್ ಈ ಚಿತ್ರದ ಮತ್ತೊಂದು ಪ್ರಮುಖಪಾತ್ರಧಾರಿ. ಹಾಗೆ ಹಲವು ವಿಶೇಷಗಳ ಈ ಚಿತ್ರಕ್ಕೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕನಕದಾಸರ ಹಾಡನ್ನೆ ಶೀರ್ಷಿಕೆ ಮಾಡಿದ್ದಾರೆ. ಅನಂತ್ ನಾಗ್ ಅವ್ರೇ ಈ ಶೀರ್ಷಿಕೆಯನ್ನ ಸಜೆಸ್ಟ್ ಮಾಡಿರೋದು. ಸಂತೆಯಲ್ಲಿ ನಿಂತ ಕಬೀರ ಚಿತ್ರದ ಯುವ ನಿರ್ದೇಶಕ ನರೇಂದ್ರ ಬಾಬು ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಚಿತ್ರ ತಂಡಕ್ಕಿದೆ.ರಾಮಚಂದ್ರ ಹಡಪದ್ ಈ ಚಿತ್ರಕ್ಕೆ ಅದ್ಭುತ ಸಂಗೀತಕವನ್ನೂ ಕೊಟ್ಟಿದ್ದಾರೆ. ಈಗ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಚಿತ್ರದ ಮೇಕಿಂಗ್ ಕೂಡ ಹೊರಬಿದ್ದಿದೆ.

LEAVE A REPLY

Please enter your comment!
Please enter your name here