ಹೊಸ ತಾಂತ್ರಿಕತೆಯ ವಿಷಯಗಳ ಚರ್ಚೆಗೆ ವಿಶ್ಚ ಆರ್ಥಿಕ ವೇದಿಕೆ ಸಜ್ಜು


Related image      ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಇಕನಾಮಿಕ್ ಫೋರಮ್) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‍ಲೆಂಡ್‍ನ ದಾವೋಸ್‍ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ. ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಇಲ್ಲಿ ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ ವರ್ಲ್ಡ್ ಇಕನಾಮಿಕ್ ಫೋರಮ್ ರೂಪಿಸುತ್ತದೆ.

      ಕ್ಲೌಸ್ ಮಾರ್ಟಿನ್ ಷ್ವಾಬ್ ಎಂಬ ಓರ್ವ ಜರ್ಮನ್-ಸಂಜಾತ ವ್ಯವಹಾರ-ವಿಷಯದ ಪ್ರಾಧ್ಯಾಪಕನಿಂದ 1971ರಲ್ಲಿ ವರ್ಲ್ಡ್ ಇಕನಾಮಿಕ್ ಫೋರಮ್ ಸಂಸ್ಥಾಪಿಸಲ್ಪಟ್ಟಿತು. ಈತ ಜಿನಿವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಇದಕ್ಕೆ ಮೂಲತಃ ಯುರೋಪಿಯನ್ ಮ್ಯಾನೇಜ್‍ಮೆಂಟ್ ಫೋರಮ್ ಎಂಬ ಹೆಸರಿಡಲಾಗಿತ್ತು. ನಂತರ 1987ರಲ್ಲಿ ಇದು ತನ್ನ ಹೆಸರನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಇಕನಾಮಿಕ್ ಫೋರಮ್) ಎಂಬುದಾಗಿ ಬದಲಾಯಿಸಿಕೊಂಡಿತು.

This is how Tokyo will use technology to transform the 2020 Olympics

A gold medal for innovation. Learn more: https://wef.ch/2JMON25

World Economic Forum यांनी वर पोस्ट केले गुरुवार, ३० ऑगस्ट, २०१८

      2008ರಲ್ಲಿ, ಉತ್ಪಾದಕ ಬಂಡವಾಳ ನೀತಿಯ ಕುರಿತಾಗಿ ಬಿಲ್ ಗೇಟ್ಸ್ ಒಂದು ವಿಷಯ ಮಂಡನಾತ್ಮಕ ಉಪನ್ಯಾಸವನ್ನು ನೀಡಿದ. ಉತ್ಪಾದಕ ಬಂಡವಾಳ ನೀತಿ ಎಂಬುದು ಬಂಡವಾಳ ನೀತಿಯ ಒಂದು ಸ್ವರೂಪವಾಗಿದ್ದು, ಇದು ಲಾಭಗಳನ್ನು ಹುಟ್ಟುಹಾಕುವುದರ ಜೊತೆಗೆ ಪ್ರಪಂಚದಲ್ಲಿ ಕಂಡುಬರುವ ಅನ್ಯಾಯಗಳು ಅಥವಾ ಪಕ್ಷಪಾತಗಳನ್ನೂ ಪರಿಹರಿಸುತ್ತದೆ. ಇದನ್ನು ನೆರವೇರಿಸುವುದಕ್ಕಾಗಿ, ಬಡವರ ಅಗತ್ಯಗಳಿಗೆ ಉತ್ತಮ ರೀತಿಯಲ್ಲಿ ಗಮನ ಹರಿಸಲು ಅದು ಮಾರುಕಟ್ಟೆಯ ಬಲಗಳನ್ನು ಬಳಸಿಕೊಳ್ಳುತ್ತದೆ ಎಂದು ತಿಳಿಸಿದ್ದರು.

      2009ರಲ್ಲಿ ನಡೆದ ಐದು-ದಿನಗಳ ವಾರ್ಷಿಕ ಸಭೆಯ ಅವಧಿಯಲ್ಲಿ, 91 ದೇಶಗಳಿಗೆ ಸೇರಿದ 2,500ಕ್ಕೂ ಹೆಚ್ಚಿನ ಸಹಭಾಗಿಗಳು ದಾವೋಸ್‍ನಲ್ಲಿ ಜಮಾವಣೆಗೊಂಡಿದ್ದರು. ಇವರ ಜೊತೆಗೆ, ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧರಾಗಿದ್ದ 219 ವ್ಯಕ್ತಿಗಳೂ ಸಹ ಸಹಭಾಗಿಗಳಲ್ಲಿ ಸೇರಿದ್ದರು. ಸಂಸ್ಥಾನ ಅಥವಾ ಸರ್ಕಾರದ 40 ಮುಖ್ಯಸ್ಥರು, 64 ಸಂಪುಟ ಸಚಿವರು, ಅಂತರರಾಷ್ಟ್ರೀಯ ಸಂಘಟನೆಗಳ 30 ಮುಖ್ಯಸ್ಥರು ಹಾಗೂ 10 ಜನ ರಾಯಭಾರಿಗಳೂ ಈ ಸಹಭಾಗಿಗಳಲ್ಲಿ ಸೇರಿದ್ದರು. ಸರ್ಕಾರೇತರ ಸಂಘಟನೆಗಳಿಗೆ ಸೇರಿದ 32 ಮುಖ್ಯಸ್ಥರು ಅಥವಾ ಪ್ರತಿನಿಧಿಗಳು, ಮಾಧ್ಯಮ-ವಲಯದ 225 ನಾಯಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಚಿಂತಕರ ಚಾವಡಿಗಳಿಗೆ ಸೇರಿದ್ದ 149 ನಾಯಕರು, ವಿಭಿನ್ನ ಧಾರ್ಮಿಕ ನಂಬಿಕೆಗಳಿಗೆ ಸೇರಿದ್ದ 15 ಧಾರ್ಮಿಕ ನಾಯಕರು ಹಾಗೂ 11 ಒಕ್ಕೂಟ ನಾಯಕರು ಈ ಸಹಭಾಗಿಗಳಲ್ಲಿ ಸೇರಿದ್ದರು ಎಂದು ತಿಳಿದು ಬಂದಿದೆ.

Image result for WEF

      ನಾಳಿನ ಜಾಗತಿಕ ನಾಯಕರಿಗೆ ಉತ್ತರಾಧಿಕಾರಿಗಳು ಎನಿಸಿಕೊಂಡಿರುವ ಯುವ ಜಾಗತಿಕ ನಾಯಕರ ಸಮುದಾಯವನ್ನು 2005ರಲ್ಲಿ ವಲ್ರ್ಡ್ ಎಕಾನಮಿಕ್ ಫೋರಂ ಸ್ಥಾಪಿಸಿತು. ವಿಶ್ವದೆಲ್ಲೆಡೆ ಇರುವ 40 ವರ್ಷ ವಯೋಮಾನದ ನಾಯಕರು ಹಾಗೂ ಅಸಂಖ್ಯಾತ ಕಾರ್ಯವಿಧಾನಗಳು ಮತ್ತು ವಲಯಗಳಿಗೆ ಸೇರಿದ ನಾಯಕರನ್ನು ಇದು ಒಳಗೊಂಡಿದೆ. 2030ರಲ್ಲಿ ವಿಶ್ವವು ಹೇಗಿರಬಹುದು ಎಂಬುದನ್ನು ಕಂಡುಕೊಳ್ಳುವುದರ ಕಲ್ಪನಾದೃಷ್ಟಿಗೆ ಸಂಬಂಧಿಸಿದ ಕ್ರಿಯಾಯೋಜನೆಯೊಂದರ 2030ರ ಉಪಕ್ರಮದಲ್ಲಿ ಸದರಿ ನಾಯಕರು ತೊಡಗಿಸಿಕೊಂಡಿದ್ದಾರೆ.

      ಒಂದು ಚಿಂತಕರ ಚಾವಡಿಯಾಗಿಯೂ ವಲ್ರ್ಡ್ ಎಕಾನಮಿಕ್ ಫೋರಂ ಸೇವೆ ಸಲ್ಲಿಸುತ್ತದೆ, ಹಾಗೂ ವೇದಿಕೆಯ ಸಮುದಾಯಗಳಿಗೆ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳಾಗಿ ಪರಿಣಮಿಸಿರುವ ಸಮಸ್ಯೆಗಳ ಕುರಿತಾಗಿ ಗಮನಹರಿಸುವ ಒಂದು ವ್ಯಾಪಕ ಶ್ರೇಣಿ ವರದಿಗಳನ್ನು ಅದು ಪ್ರಕಟಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಪರ್ಧಾತ್ಮಕತೆ, ಜಾಗತಿಕ ಅಪಾಯಗಳು ಮತ್ತು ಭವಿಷ್ಯದ ಘಟನಾವಳಿಗಳ ಕುರಿತಾದ ಚಿಂತನೆಯಂಥ ಕ್ಷೇತ್ರಗಳಲ್ಲಿ ಪ್ರಸ್ತುತತೆಯ ವರದಿಗಳನ್ನು ರೂಪಿಸುವುದರ ಕುರಿತಾಗಿ ಕಾರ್ಯತಂತ್ರದ ಅಂತರ್ದೃಷ್ಟಿಯ ತಂಡಗಳು ಗಮನಹರಿಸುತ್ತವೆ.

Image result for tokyo stadium olympics 2020

      ಇದೆಲ್ಲ ಒಂದು ಕಡೆಯಾದರೆ ಜಪಾನ್‍ನ ಟೋಕಿಯೋದಲ್ಲಿ ಇರುವ ಕ್ರೀಡಾಂಗಣದಲ್ಲಿ 2020ರಲ್ಲಿ ಒಲಂಪಿಕ್ಸ್ ಗೇಮ್ಸ್ ನಡೆಸಲು ನಿರ್ಣಯಮಾಡಲಾಗಿದೆ. ಈ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಆದರೆ ಈ ಬಾರಿ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ಕ್ರೀಡಾಂಗಣಕ್ಕೆ ವಿನೂತನ ರೀತಿಯಲ್ಲಿ ನೂತನ ತಂತ್ರಜ್ಞಾನ ಬಳಕೆ ಮಾಡುವ ಎಲ್ಲಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಕ್ರೀಡಾಂಗಣಕ್ಕೆ ವಿದ್ಯುತ್ಛಕ್ತಿ ನೀಡುವಲ್ಲಿ ಸೋಲಾರ್ ಮತ್ತು ಗಾಳಿಯಂತ್ರಗಳಿಂದ ಶಕ್ತಿಯನ್ನು ಪಡೆಯಲು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಸಂಬಂಧ ಈ ಬಾರಿಯ ವಿಶ್ವ ಆರ್ಥಿಕ ವೇದಿಕೆಯಲ್ಲಿ ಹಲವು ಗಣ್ಯರು ಚರ್ಚೆ ಮಾಡಲಿದ್ದಾರೆ .

      ಜಪಾನ್‍ನಲ್ಲಿ ರಸ್ತೆಗಳ ಮೇಲೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಸೋಲಾರ್ ರಸ್ತೆಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಜಪಾನ್‍ನ ಟೋಕಿಯೋದಲ್ಲಿ ಸೌರ ಶಕ್ತಿಯನ್ನು ಬಳಸಿಕೊಂಡು ಕಾರುಗಳು ಚಲಿಸುವಂತೆ ಮಾಡುವ ಯೋಜನೆ ಇದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

      ರಸ್ತೆಯ ಮೇಲೆಸೋಲಾರ್‍ನ ವ್ಯವಸ್ಥೆಯನ್ನ ಅಳವಡಿಕೆ ಮಾಡಲಾಗುತ್ತದೆ. ಅದರ ಮೇಲೆಯೇ ವಾಹನಗಳನ್ನು ಚಲಾಯಿಸಬಹುದಾಗಿದೆ. ಈ ಬಗ್ಗೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ಚರ್ಚೆ ಮಾಡಲಾಗುವುದು.

Related image

      ಕ್ರೀಡಾ ಕೂಟಕ್ಕೆ ಸಂಬಂಧಪಟ್ಟಂತೆ ಕ್ರೀಡಾಪಟುಗಳಿಗೆ ಮರುಬಳಕೆ ಮಾಡಬಹುದಂತಹ ವಸ್ತುಗಳ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ. ಶೇ.99ರಷ್ಟು ವಸ್ತುಗಳನ್ನು ಮರುಬಳಕೆ ಮಾಡಬಹುದಾಗಿದೆ.

      ಜಪಾನ್‍ನ ರಸ್ತೆಗಳಲ್ಲಿ ಓಡಾಡುವ ನೂತನ ತಂತ್ರಜ್ಞಾನದ ಕಾರುಗಳನ್ನು ತಯಾರು ಮಾಡಲಾಗಿದೆ. ಇವುಗಳು ಚಾಲಕರಹಿತ ಕಾರುಗಳಾಗಿದ್ದು, ಇವು ಸುರಕ್ಷಿತವಾಗಿವೆ ಎಂಬುದಕ್ಕೆ ಸುಮಾರು 1500 ಜನ ಟೆಸ್ಟ್ ಡ್ರೈವ್ ಮಾಡಿದ್ದಾರೆ. ಸ್ಮಾರ್ಟ್ ಫೋನ್ ಬಳಕೆಯಿಂದ ಕಾರಿನ ಡೋರ್‍ಗಳನ್ನು ತೆರೆಯಬಹುದು. ನಾವು ಸೇರಬೇಕಾದ ಸ್ಥಳವನ್ನು ಗುರುತು ಮಾಡಿದರೆ ಡ್ರೈವರ್‍ಲೆಸ್ ಟ್ಯಾಕ್ಸಿ ಸುರಕ್ಷಿತವಾಗಿ ನಿರ್ದಿಷ್ಠ ಸ್ಥಳಕ್ಕೆ ತಲುಪಿಸುತ್ತದೆ. ಈಗಾಗಲೇ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ ಎಂದು ತಿಳಿದುಬಂದಿದೆ.

      ನೂತನವಾಗಿ ತಯಾರಿಸಲ್ಪಟ್ಟ ರೋಬೋಗಳ ಮೂಲಕ ವಾಹನಗಳಲ್ಲಿ ಭಾಷೆಯ ತರ್ಜುಮೆ ಮಾಡಲಾಗುವುದು. ಅಲ್ಲದೆ ರೋಬೋಟ್‍ಗಳಿಂದ ಹಿರಿಯ ವಯಸ್ಕರಿಗೆ ಸಹಾಯ ಮಾಡುವುದು. ಅವರ ಬ್ಯಾಗ್‍ಗಳನ್ನು ರವಾನಿಸುವುದು ಸೇರಿದಂತೆ ಮುಂತಾದ ಕಾರ್ಯಗಳನ್ನು ಮಾಡಲು ತಯಾರಿ ನಡೆಸಲಾಗಿದೆ.Related imageಅಲ್ಲದೆ ಒಲಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ನೀಡಲು ಹಳೆಯ ಮೊಬೈಲ್‍ಗಳನ್ನು ಬಳಸಿಕೊಂಡು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 80ಸಾವಿರ ಮೊಬೈಲ್‍ಗಳನ್ನು ದಾನವಾಗಿ ಸ್ವೀಕರಿಸಲಾಗಿದೆ ಎಂದು ತಿಳಿದುಬಂದಿದೆ.

      ಈ ಎಲ್ಲಾ ವಿಚಾರಗಳ ಕುರಿತಾಗಿ ನಡೆಯುವ ವಿಶ್ವ ಆರ್ಥಿಕ ಸಭೆಯಲ್ಲಿ ಚರ್ಚಿಸಿ 2020ರ ವೇಳೆಗೆ ನಡೆಯುವ ಒಲಂಪಿಕ್ಸ್ ಕ್ರೀಡಾಕೂಟದ ವೇಳೆಗೆ ಕಾರ್ಯಗತ ಮಾಡಲಾಗುವುದು.

– ರಾಕೇಶ್.ವಿ. ತುಮಕೂರು

Recent Articles

spot_img

Related Stories

Share via
Copy link
Powered by Social Snap