ಪತ್ನಿ ದೂರಿನ ಮೇರಿಗೆ ಪತಿಯನ್ನು ಅರೆಸ್ಟ್ ಮಾಡಿ ಪೊಲೀಸರು
ಬೆಂಗಳೂರು : ಬೇಟಿ ಬಚಾವೊ ಬೇಟಿ ಪಡಾವೋ ಎನ್ನುತ್ತಿರುವ ಈಗಿನ ಸಮಾಜದಲ್ಲೂ ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಂಧ್ರದಲ್ಲಿ ಸಿವಿಲ್ ಕಂಟ್ರ್ಯಾಕ್ಟರ್ ಆಗಿ ಮಾಡುತ್ತಿದ್ದ ವೆಂಕಟೇಶ್ವರ ರಾವ್ ಎಂಬುವನು. 6 ವರ್ಷಗಳ ಹಿಂದೆ ಬೆಂಗಳೂರಿನ ಎಚ್ಎಎಲ್ ಬಳಿ ಇರುವ ರೆಡ್ಡಿ ಪಾಳ್ಯದ ನಿವಾಸಿಯಾದ ರಾಧಿಕಾರನ್ನ ಮದುವೆಯಾಗಿದ್ದ. ಹಿರಿಯರು ನೋಡಿ ನಿಶ್ಚಯಿಸಿದ ವಿವಾಹ ಇದಾಗಿದ್ದು, ರಾಧಿಕಾ ತನ್ನ ಪತಿ ವೆಂಕಟೇಶ್ವರ ರಾವ್ ಜತೆ ಒಂಗೋಲ್ನಲ್ಲೇ ಅತ್ತೆ ಮನೆಯಲ್ಲಿ ಇದ್ದಳು.
ಗಂಡ, ಅತ್ತೆ, ಮಾವನಿಂದ ಕಿರುಕುಳ :
ಈ ದಂಪತಿಗೆ ವಿವಾಹವಾದ ಒಂದು ವರ್ಷದ ನಂತರ ಹೆಣ್ಣು ಮಗುವೊಂದು ಜನಿಸಿತ್ತು. ಆಗಲೇ ಪತಿರಾಯ ಹಾಗೂ ಆತನ ಮನೆಯವರೆಲ್ಲ ಗಂಡು ಮಗು ಬೇಕಿತ್ತು ಅಂತ ರಾಗ ಎಳೆಯಲಾರಂಭಿಸಿದ್ರು. ಅಷ್ಟೇ ಅಲ್ಲದೆ ಮದುವೆಯ ಸಮಯದಲ್ಲಿ ವರಕ್ಷಿಣೆ ಹಣ ಕೊಟ್ಟಿಲ್ಲ ಅಂತ ಆಗಾಗ ಜಗಳ ತೆಗೆದು ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಲವು ಬಾರಿ ಪೊಲೀಸರಿಗೆ ದೂರು :
ಕಿರುಕುಳ ನೀಡುತ್ತಿರುವ ಬಗ್ಗೆ ಸಾಕಷ್ಟು ಬಾರಿ ಆಂದ್ರಪ್ರದೇಶದ ಒಂಗೋಲ್ನಲ್ಲೇ ಪೊಲೀಸ್ ಠಾಣೆಯಲ್ಲಿ ರಾಧಿಕಾ ದೂರು ನೀಡಿದ್ದರು, ಪೋಲೀಸರು ವೆಂಕಟೇಶ್ವರ ರಾವ್ಗೆ ಕೌನ್ಸಿಂಲ್ ಸಹ ಮಾಡಿಸಲಾಗಿತ್ತು. ಆದರೂ ಹಣ ಹಾಗೂ ಗಂಡು ಮಗುವಿನ ಭೂತ ತಲೆಯೇರಿತ್ತು.
ಹೆಣ್ಣು ಮಗುವಿನ ಕೊಲೆಗೆ ಯತ್ನ : ಗರ್ಭಿಣಿಯಾಗಿದ್ದ ರಾಧಿಕಾ, ತನ್ನ ತವರಿಗೆ ಬಂದಿದ್ದಳು. ಇಲ್ಲೇ ಮಗು ಸಹ ಆಯಿತು. 2ನೇ ಮಗು ಸಹ ಹೆಣ್ಣಾಯಿತು ಎಂದು ಪತಿ ಹಾಗೂ ಅತ್ತೆ ಮನೆಯವರು ಮತ್ತೆ ಜಗಳ ತೆಗೆದಿದ್ದರಂತೆ. ಐದು ದಿನಗಳ ಹಿಂದೆ ರಾಧಿಕಾಗೆ ಮಗು ಆದ ನಂತರ ಅತ್ತೆ ಮನೆಗೆ ಬಂದಿದ್ದ ವೆಂಕಟೇಶ್ವರ ರಾವ್ ತನ್ನ ಮೊದಲ ಮಗುವನ್ನು ಸಿಟ್ಟಿನಲ್ಲಿ ಕೊಲೆ ಮಾಡಲು ಯತ್ನಿಸಿದ್ದಾನೆ. 5 ವರ್ಷದ ಮಗಳ ಕುತ್ತಿಗೆ ಹಿಸುಕುವಾಗ ಅಡ್ಡ ಬಂದ ಪತ್ನಿ ಮೇಲೂ ಕೈ ಮಾಡಿದ್ದಾನೆ. ಇದರಿಂದಾಗಿ ರಾಧಿಕಾ ಎಚ್ಎಎಲ್ ಪೊಲೀಸ್ ಠಾಣಾಯಲ್ಲಿ ಪತಿ ವೆಂಕಟೇಶ್ವರ ರಾವ್, ಮಾವ ವೆಂಕಟ್ ರಾವ್, ಅತ್ತೆ ಜಾಲಮ್ಮ ಹಾಗೂ ಪತಿಯ ಅಕ್ಕ ಅನ್ನಪೂರ್ಣ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು : ಆತೋಪಿ ವೆಂಕಟೇಶ್ವರ ರಾವ್ ವಿರುದ್ಧ ದೂರು ದಾಖಲಿಸಿಕೊಂಡು ಎಚ್ಎಎಲ್ ಪೊಲೀಸರು ವೆಂಕಟೇಶ್ವರ ರಾವ್ನನ್ನ ಬಂಧಿಸಿದ್ದಾರೆ. ಹೆಣ್ಣು ಮಕ್ಕಳು ಊಹಿಸದ ಎತ್ತರಕ್ಕೆ ಬೆಳೆಯುತ್ತಿರುವಾಗಲೂ ಹೆಣ್ಣು ಮಕ್ಕಳು ಬೇಡ ಅಂತ ಕೊಲ್ಲುವ ನಿರ್ಧಾರಕ್ಕೆ ಬರುವ ತಂದೆ ಇರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಂಬಂಧಿಕರು ದುಃಖವನ್ನು ವ್ಯಕ್ತಪಡಿಸಿದರು.