ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಅಸ್ಸೋಂ ಸಿಎಂ ಡಾ. ಹಿಮಂತ ಬಿಶ್ವ ಶರ್ಮ

ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಅಸ್ಸೋಂ ರಾಜ್ಯದ ಮುಖ್ಯಮಂತ್ರಿ ಡಾ.ಹಿಮಂತ ಬಿಶ್ವ ಶರ್ಮ ಅವರು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್​​​ಗೆ ಆಗಮಿಸಿದ ಅಸ್ಸೋಂ ಸಿಎಂ ಹಿಮಂತ ಬಿಶ್ವ ಶರ್ಮ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಬರಮಾಡಿಕೊಂಡರು.

ರಾಜ್ಯದ ಪರವಾಗಿ ಸ್ವಾಗತ ಕೋರಿ ಸಂಪ್ರದಾಯದಂತೆ ಗೌರವ ಸಲ್ಲಿಸಿದರು.ನಂತರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೆಲ ಕಾಲ ಮಾತುಕತೆ ನಡೆಸಿದರು. ಅನೌಪಚಾರಿಕವಾಗಿ ನಡೆದ ಮಾತುಕತೆ ವೇಳೆ ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನೆ ನಡೆದಿದ್ದು, ಯಾವುದೇ ರಾಜಕೀಯ ವಿಚಾರಗಳ ಚರ್ಚೆಯಾಗಿಲ್ಲ ಎನ್ನಲಾಗ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ