ಹಾಸನ :
ಲಾಕ್ಡೌನ್ ಹಿನ್ನೆಲೆ ಬೆಂಗಳೂರಿನಿಂದ ತಮ್ಮ ಊರಿಗೆ ಬಂದಿದ್ದ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮದ 27 ವರ್ಷದ ಅರ್ಥೇಶ್ ಹಾಗೂ ಹೆನ್ನಾಲಿ ಗ್ರಾಮದ 23 ವರ್ಷದ ಕೃತಿಕಾ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇಬ್ಬರೂ ಅವರವರ ಊರಿಗೆ ತೆರಳಿದ್ದರು. ತನ್ನ ಊರಿನಿಂದ ಹೆಂಡತಿಯ ಊರಾದ ಹೆನ್ನಾಲಿಗೆ ಬಂದಿದ್ದ ಅರ್ಥೇಶ್ ಕೃತಿಕಾ ಜೊತೆ ಸಮಯ ಕಳೆಯಲು ಹೊರಗೆ ಹೋಗಲು ಯೋಚಿಸಿದ್ದ. ಇಬ್ಬರೂ ಹೊರಗೆ ಸುತ್ತಾಡಿಬರುವುದಾಗಿ ಹೇಳಿ ಬೈಕ್ನಲ್ಲಿ ಹೊರಟಿದ್ದರು.
ಆದರೆ, ರಾತ್ರಿಯಾದರೂ ಮಗಳು-ಅಳಿಯ ವಾಪಾಸ್ ಬಾರದ ಕಾರಣ ಕೃತಿಕಾಳ ಮನೆಯವರು ನದಿಯ ಬಳಿ ಹೋದಾಗ ಬೈಕ್ ನಿಂತಿರುವುದು ಕಂಡಿತ್ತು. ನಂತರ ಮೀನುಗಾರರು ಹುಡುಕಿದಾಗ ಇಬ್ಬರ ಶವ ಸಿಕ್ಕಿದೆಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ