ನಗರದಲ್ಲಿ ವೀಲಿಂಗ್‌ : 6 ಮಂದಿ ಬಂಧನ…!

ಬೆಂಗಳೂರು:

     ನಗರದ ಸಂಚಾರ ಪೊಲೀಸರ ಪಶ್ಚಿಮ ವಿಭಾಗದ ವಿಶೇಷ ತಂಡವು ಪಶ್ಚಿಮ ಬೆಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ವ್ಹೀಲಿಂಗ್ ಮಾಡಿದ್ದಕ್ಕಾಗಿ ಆರು ಮಂದಿಯನ್ನು ಬಂಧಿಸಿದೆ.

    ನಗರದ ಪಶ್ಚಿಮ ಭಾಗದಲ್ಲಿ ವ್ಹೀಲಿಂಗ್ ಪ್ರಕರಣಗಳ ತನಿಖೆಗಾಗಿ ವಿವಿಧ ಠಾಣೆಗಳ ಎಂಟು ಸದಸ್ಯರನ್ನೊಳಗೊಂಡ ತಂಡವನ್ನು ಜೂನ್ 20 ರಂದು ರಚಿಸಲಾಗಿದೆ.

    ಮಾಗಡಿ ರಸ್ತೆ ಸಂಚಾರ ನಿರೀಕ್ಷಕರ ನೇತೃತ್ವದಲ್ಲಿ ತಂಡವು ಸ್ಥಳೀಯ ದೂರುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದ ಎಚ್ಚರಿಕೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತದೆ. ಈ ಎಚ್ಚರಿಕೆಗಳು ಹೆದ್ದಾರಿಗಳು ಮತ್ತು ಇತರ ಜನನಿಬಿಡ ರಸ್ತೆಗಳಲ್ಲಿ ಸಂಭವಿಸುವ ಅಪಾಯಕಾರಿ ಬೈಕ್ ಸ್ಟಂಟ್‌ಗಳ ಬಗ್ಗೆ ಅವರಿಗೆ ತಿಳಿಸುತ್ತವೆ.

 

   ತಂಡದ ಅಧಿಕಾರಿಯೊಬ್ಬರು ಮಾತನಾಡಿ, ‘ನಾವು ವಾಹನಗಳಲ್ಲಿ ಆದ ಯಾವುದೇ ಮಾರ್ಪಾಡುಗಳನ್ನು ಗುರುತಿಸಿದರೆ, ಸಂಪೂರ್ಣ ತಪಾಸಣೆ ನಡೆಸಿದ ನಂತರ ವಾಹನದ ನೋಂದಣಿಯನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ತಿಳಿಸುತ್ತೇವೆ. ಚಾಲನಾ ಪರವಾನಗಿಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುತ್ತದೆ’ ಎಂದರು.

    ಪುನರಾವರ್ತಿತ ಅಪರಾಧಗಳಮೇಮಿ ಗುರುತಿಸಲು ಮತ್ತು ಅವರನ್ನು ಬಂಧಿಸಲು ತಂಡವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳು ಮತ್ತು ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

    ಅಪರಾಧಿಗಳ ವಿರುದ್ಧ ಭಾರತೀಯ ಮೋಟಾರು ವಾಹನಗಳ (ಐಎಂವಿ) ಕಾಯ್ದೆಯ ಐಪಿಸಿ ಸೆಕ್ಷನ್ 279 (ಸಾರ್ವಜನಿಕವಾಗಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು ಸೆಕ್ಷನ್ 189 (ರೇಸಿಂಗ್ ಮತ್ತು ವೇಗದ ಪ್ರಯೋಗಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಅಥವಾ ಹೆಲ್ಮೆಟ್ ಧರಿಸದೇ ಇದ್ದರೆ, ಅಂತವರ ಮೇಲೆ ಹೆಚ್ಚುವರಿಯಾಗಿ ಐಎಂವಿಯ ಸೆಕ್ಷನ್ 3(1) r/w 181 ಅಥವಾ 129 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link