ಮುಂಬೈ:
ಈ ವರ್ಷದ ಜನವರಿಯಿಂದ ಜೂನ್ ವರೆಗೆ ಕೇವಲ ಆರು ತಿಂಗಳಲ್ಲಿ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ 557 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ವರದಿ ತಿಳಿಸಿದೆ.
ಅಮರಾವತಿ ವಿಭಾಗೀಯ ಕಮಿಷನರೇಟ್ ಸಿದ್ಧಪಡಿಸಿದ ವರದಿಯ ಪ್ರಕಾರ, ಐದು ಜಿಲ್ಲೆಗಳಾದ ಅಮರಾವತಿ, ಅಕೋಲಾ, ಬುಲ್ಧಾನ, ವಾಶಿಮ್ ಮತ್ತು ಯವತ್ಮಾಲ್ ಜಿಲ್ಲೆಗಳಲ್ಲಿ 2024 ರ ಜನವರಿಯಿಂದ ಜೂನ್ ವರೆಗೆ ಒಟ್ಟು 557 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಅಮರಾವತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 170 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ನಂತರ ಯವತ್ಮಾಲ್ನಲ್ಲಿ 150, ಬುಲ್ಧಾನದಲ್ಲಿ 111, ಅಕೋಲಾದಲ್ಲಿ 92 ಮತ್ತು ವಾಶಿಮ್ನಲ್ಲಿ 34 ಆತ್ಮಹತ್ಯೆಗಳು ದಾಖಲಾಗಿವೆ. 53 ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರ ನೆರವು ನೀಡಿದ್ದು, 284 ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ವರದಿ ತಿಳಿಸಿದೆ ವರದಿಯಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳಿಗೆ ಪ್ರತಿಕ್ರಿಯಿಸಿದ ಅಮರಾವತಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ನಾಯಕ ಬಲವಂತ ವಾಂಖಡೆ, ಅತಿ ಹೆಚ್ಚು ರೈತರ ಆತ್ಮಹತ್ಯೆಗಳನ್ನು ದಾಖಲಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದಾಗಿದೆ ಮತ್ತು ಈ ಲೆಕ್ಕಾಚಾರದಲ್ಲಿ ಅಮರಾವತಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ.
“ಬೆಳೆ ನಷ್ಟ, ಸಮರ್ಪಕ ಮಳೆಯ ಕೊರತೆ, ಈಗಿರುವ ಸಾಲದ ಹೊರೆ ಮತ್ತು ಸಕಾಲದಲ್ಲಿ ಕೃಷಿ ಸಾಲದ ಕೊರತೆಯು ರೈತರ ಆತ್ಮಹತ್ಯೆಗೆ ಕೆಲವು ಪ್ರಮುಖ ಕಾರಣಗಳಾಗಿವೆ.
ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ಈಡೇರಿಸಬೇಕು ಮತ್ತು ಅವರಿಗೆ ಸೂಕ್ತ ನೆರವು ನೀಡಬೇಕು ಎಂದು ವಾಂಖಡೆ ಹೇಳಿದ್ದಾರೆ.