ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ: ಇಬ್ಬರು ಆರೆಸ್ಟ್

ಮಂಗಳೂರು:

   ಮುಡಾ ಹಗರಣದ  ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ  ಸೇರಿದಂತೆ ಇಬ್ಬರ ಮೇಲೆ ವಾಮಾಚಾರ  ನಡೆಸಿದ್ದ ಇಬ್ಬರು ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ. ಸ್ನೇಹಮಯಿ ಕೃಷ್ಣ, ಗೋವಿಂದರಾಜು ಮೇಲೆ ವಾಮಾಚಾರ ನಡೆಸಿದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.

   ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ ನಗರದಲ್ಲಿರುವ ಸ್ಮಶಾನದಲ್ಲಿ ಆರೋಪಿಗಳು ವಾಮಾಚಾರ ಮಾಡಿಸಿದ್ದರು. ಸ್ಮಶಾನ ಕಾಳಿಕಾಂಬ ಗುಡಿಯಲ್ಲಿ ಕುರಿಗಳನ್ನು ಬಲಿ ನೀಡಿದ್ದರು. ಈ ವಿಚಾರ ಸ್ಮಶಾನ ಕಾಳಿಕಾಂಬ ದೇವಸ್ಥಾನದ ಅರ್ಚಕರಿಗೆ ತಿಳಿಯದಂತೆ ಬಲಿ ನೀಡಿದ್ದರು.

   ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ, ಸುಮಾ ಆಚಾರ್ಯ ಹೆಸರಿನ ಚೀಟಿ ನೀಡಿ ದೇವಿಗೆ ಪೂಜೆ, ಬಲಿ ನೀಡಿದ್ದ ಕುರಿಗಳ ರಕ್ತವನ್ನು ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋಗೆ ಅರ್ಪಣೆ ಮಾಡಲಾಗಿತ್ತು. ವಾಮಾಚಾರದ ದೃಶ್ಯ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಪತ್ತೆಯಾಗಿತ್ತು. ಪ್ರಸಾದ್‌ ಅತ್ತಾವರ ರಾಮಸೇನಾ ಸಂಘಟನೆಯ ಸಂಸ್ಥಾಪಕ ಆಗಿದ್ದಾರೆ. ಮಸಾಜ್ ಪಾರ್ಲರ್ ಮೇಲಿನ ಗಲಾಟೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು.

Recent Articles

spot_img

Related Stories

Share via
Copy link