ಕೂಲಿಕಾರರ ಮೇಲೆ ಗ್ರಾಮ ಪಂಚಾಯ್ತಿ ಸದಸ್ಯರ ಹಲ್ಲೆ : ಸಂದಾನ ಮಾಡಿಕೊಳ್ಳಿ ಎಂದ ಪೋಲೀಸ್ ಇಲಾಖೆ

 ಜಗಳೂರು :

      ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರ ಮೇಲೆ ಗ್ರಾಮ ಪಂಚಾಯ್ತಿ ಸದಸ್ಯರು ಸಹಚಾರರೊಂದಿಗೆ ಹಲ್ಲೆ ಮಾಡಿರುವ ಘಟನೆ ಜರುಗಿದೆ.

      ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲೆಮಾಚಿಕೆರೆ ಗ್ರಾಮದಲ್ಲಿ ಎಂದಿನಂತೆ ಅಲ್ಲಿನ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಡೆಸುತ್ತಿರುವ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ನಾಗರಾಜು, ಪೂಜಾರು ಬೊಮ್ಮಪ್ಪ, ಪೂಜಾರು ಬಸವನಗೌಡ, ಪೂಜಾರು ಮಂಜಪ್ಪ, ಗಿಡ್ಡಜ್ಜರ ಹನುಮಂತಪ್ಪ, ಮಾರಜ್ಜರ ಬಸವನಗೌಡ , ಗ್ರಾಮ ಪಂಚಾಯ್ತಿ ಸದಸ್ಯರಾದ ಮಹಾಂತೇಶ್, ಬಸವರಾಜ್ ಹಾಗೂ ಸಹಚರ ಬೊಮ್ಮಣ್ಣ ಎನ್ನುವವರು ಹಲ್ಲೆ ನಡೆಸಿ ಮಹಿಳೆಯರ ಬಟ್ಟೆ ಹರಿದು, ಆರೆ ಗುದ್ದಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಆಸ್ಪತ್ರೆಗೆ ಒಳಗಾದ ಕರಿಬಸನಗೌಡ, ಸುಮಾ ಹೇಳಿದರು.

ಗಲಾಟೆಗೆ ಕಾರಣ:

      ಸುಮಾರು 80ಕ್ಕೂ ಹೆಚ್ಚು ಕೂಲಿಕಾರರಿದ್ದರು ಮಲೆಮಾಚಿಕೆರೆ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿದ್ದರು. ಪ್ರತಿ ದಿವಸ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಹೇಳಿದ 3 ಟ್ರ್ಯಾಕ್ಟರ್‍ಗಳಿಗೆ ಕೆಲಸದ ಮಣ್ಣನ್ನು ತುಂಬುತ್ತಿದ್ದೆವು. ಆದರೆ ಎರಡು ಶನಿವಾರ ನಾಗರಾಜು ಎಂಬುವರು ಟ್ರ್ಯಾಕ್ಟರ್‍ಗಳನ್ನು ತಂದರು. ಅಧಿಕಾರಿಗಳು ಹೇಳಿದಂತೆ ಟ್ರ್ಯಾಕ್ಟರ್‍ಗಳಿಗೆ ಮಣ್ಣುನ್ನು ತುಂಬಿದೆವು. ಅಂದು ವಾಪಾಸ್ಸು ಹೋದರು . ಗೊಂದಲ ಬೇಡ ಮಣ್ಣನ್ನು ಏರಿಗೆ ಹಾಕ್ರಿ ಯಾವುದೇ ಟ್ರ್ಯಾಕ್ಟರ್‍ಗಳು ಬ್ಯಾಡ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಏರಿಗೆ ಮಣ್ಣು ಹಾಕುತ್ತಿದ್ದೆವೆ. ಏಕಾಯಿಕಿ ನಾಗರಾಜು ಮೇಲೆ ತಿಳಿಸಿದಂತೆ ಇತರರು ಸಹಚರರನ್ನು ಕರೆ ತಂದು ನಮ್ಮನ್ನು ಕಲ್ಲು , ಹಾರೆ ಸೇರಿದಂತೆ ಮನ ಬಂದಂತೆ ಹೊಡೆದು ಹಲ್ಲೇ ಮಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾ, ಕರಿಬಸವನಗೌಡ ಪತ್ರಿಕರ ನಡೆದ ಘಟನೆ ವಿವರಿಸಿದರು. ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರು ಸ್ಥಳ ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಏಕಾಏಕಿ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಜೆಸಿಬಿ ಮೂಲಕ ನಾವು ಕಾಮಗಾರಿ ನಡೆಸುತ್ತೇವೆ ನೀವು ಕೂಲಿ ಕಾರ್ಮಿಕರು ನಾವು ಕೊಟ್ಟ ಹಣವನ್ನು ತೆಗೆದುಕೊಂಡು ಮನೆಯಲ್ಲಿ ಇರುವುದು ಬಿಟ್ಟು ನೀವೇಕೆ ಬಂದಿದ್ದೀರಿ ಎಂದು ಬೆದರಿಕೆ ಒಡ್ಡುತ್ತಿದ್ದು, ಇದಕ್ಕೆ ಪ್ರತಿರೋದಿಸಿದಾಗ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

      ಇದರಿಂದ ಕೆಲ ಕೂಲಿಕಾರ್ಮಿಕರು ಎದರಿಕೆಯಿಂದ ಮನೆ ಸೇರಿದ್ದು, ಹಲ್ಲೆಗೊಳಗಾದ ಸುಮಾ, ಕರಿಬಸವನಗೌಡ, ಕೊಟ್ರೇಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತ ಕೆಲ ಕೂಲಿಕಾರ್ಮಿಕರು ಕಾಮಗಾರಿ ಸಾಮಗ್ರಿ ಸಮೇತವಾಗಿ ಪೊಲೀಸ್ ಠಾಣೆಗೆ ಆಗಮಿಸಿ ಹಲ್ಲೆ ಮಾಡಿದವರು ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಇದೇ ವೇಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಮುಖಂಡರು ಸೇರಿ ರಾಜಿಸಂದಾನ ಮಾಡುವ ಮೂಲಕ ಘಟನೆಗೆ ತೆರೆ ಎಳೆಯಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಕಾರ್ಮಿಕರು ದೂರು ದಾಖಲಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಕೂಲಿ ಕಾರ್ಮಿಕರು ಮಲೆಮಾಚಿಕೆರೆ ಗ್ರಾಮದ ನಾಗರಾಜು, ಮಾಹಾಂತೇಶ್, ಮಂಜಪ್ಪ, ಹನುಮಂತಪ್ಪ ಇತರರು ನಮ್ಮ ಮೇಲೆ ಹಲ್ಲೇ ಮಾಡಿದ್ದಾರೆ ಎಂದು ನೂರಾರು ಕೂಲಿಕಾರರು ದೂರು ನೀಡಿದ್ದಾರೆ. ಸದ್ಯ ದೂರು ದಾಖಲು ಮಾಡಿಲ್ಲ. ಪರಿಶೀಲನೆ ನಡೆಸಿ ದೂರು ದಾಖಲಿಸಲಾಗುವುದು.
                                                                                             – ಪಿ.ಎಸ್.ಐ.ಇಮ್ರಾನ್‍ಖಾನ್

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link