ಹುಳಿಯಾರಿನಲ್ಲಿ ನೆರೆ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳ ಸಂಗ್ರಹ

ಹುಳಿಯಾರು:

               ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘನೆ ಹಾಗೂ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದಿಂದ ಕೇರಳ ರಾಜ್ಯದ ನೆರೆ ಸಂತ್ರಸ್ತರ ಜನರಿಗೆ ನೆರವಿಗಾಗಿ ಸಾರ್ವಜನಿಕರಿಂದ ಆಹಾರ ಸಾಮಗ್ರಿಗಳು ಹಾಗೂ ದಿನಬಳಕೆ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಔದಾರ್ಯ ಮೆರೆದಿದ್ದಾರೆ.

               ಕರವೇ ಹಾಗೂ ಜಯಕರ್ನಾಟಕದ ಪದಾಧಿಕಾರಿಗಳು ಊರಿನ ಪ್ರಮುಖ ಬೀದಿಗಳಾದ ರಾಜ್ ಕುಮಾರ್ ರಸ್ತೆ, ಬಸ್ ನಿಲ್ದಾಣ, ಪೇಟೆ ಬೀದಿ, ಮಸೀದಿ ಬೀದಿ ರಾಮಗೋಪಾಲ್ ಸರ್ಕಲ್, ಕೃಷಿ ಮಾರುಕಟ್ಟೆ ಹೀಗೆ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸಂಗ್ರಹ ಕಾರ್ಯ ಮಾಡಿದರು.

              ಬೆಡ್ ಶೇಟ್, ಸೀರೆ, ಚಾಪೆ, ಟವಲ್, ಛತ್ರಿ, ಲುಂಗಿ, ತಟ್ಟೆ, ಲೋಟ, ಸೋಪು, ಪೇಸ್ಟ್, ಶಾಂಪು, ಬ್ರೆಷ್, ಕೊಬ್ಬರಿ ಎಣ್ಣೆ, ಬಿಸ್ಕೇಟ್, ನೀರು, ಬ್ರೆಡ್, ಅಕ್ಕಿ, ಔಷಧಿ ಹೀಗೆ ಅಗತ್ಯ ವಸ್ತುಗಳನ್ನು ಉದಾರವಾಗಿ ನೀಡಿ ಮಾನವೀಯತೆ ಪ್ರದರ್ಶಿಸಿದರು.

              ಸಂಗ್ರಹವಾದ ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಕೊಡಗು ಜಿಲ್ಲೆಯ ಬರ ಪೀಡಿದ ಒಂದು ಪ್ರದೇಶಕ್ಕೆ ನೇರವಾಗಿ ಕೊಂಡೊಯ್ದು ಸ್ವತಃ ಕನ್ನಡ ಪರ ಸಂಘಟನೆಗಳೇ ವಿತರಣೆ ಮಾಡಲು ನಿರ್ಧರಿಸಿದ್ದು ಮಂಗಳವಾರ ಮುಂಜಾನೆ ಲಾರಿಯಲ್ಲಿ ಕೊಡಗಿಗೆ ತೆರಳಿದರು.

               ಈ ಸಂದರ್ಭದಲ್ಲಿ ಕರವೇಯ ಕೋಳಿ ಶ್ರೀನಿವಾಸ್, ಕ್ಯಾಸೆಟ್ ರಂಗಸ್ವಾಮಿ, ಲಕ್ಷ್ಮೀಕಾಂತ್, ನವೀನ್, ಕುಮಾರ್, ಹರೀಶ್, ರಘು, ಪ್ರಕಾಶಣ್ಣ, ಬಸವರಾಜು, ಮಂಜುನಾಥ್, ಅಂಜನಕುಮಾರ್, ಜಯಕರ್ನಾಟಕದ ಮೋಹನ್ ಕುಮಾರ್ ರೈ, ಕಾರ್ಗಿಲ್ ಸತೀಶ್, ಮಂಜುನಾಥ್, ನಾಗರಾಜು, ಕಿಟ್ಟಪ್ಪ, ರವಿ, ಪರಮೇಶ್, ಕರಣ್ ಪದವಿ ಕಾಲೇಜಿನ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಎನ್‍ಎಸ್‍ಎಸ್ ಅಧಿಕಾರಿ ಶಿವಯ್ಯ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link