ದೇಶಿ ತಳಿ ಆಕಳು ಹಾಗೂ ಕರುಗಳ ಪ್ರದರ್ಶನ

ಹಾವೇರಿ:

        ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂದಿಸಿದಂತೆ ದಿನಾಂಕ:17.11.2018 ರ ಶನಿವಾರ ದಂದು ಹಾವೇರಿ ತಾಲೂಕಿನ ಕುಳೇನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ,ಹಾವೇರಿ ಮತ್ತು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,ಹಾವೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಿಶ್ರ ತಳಿ ಹಾಗೂ ದೇಶಿ ಆಕಳು ಮತ್ತು ಕರುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

       ಸದರಿ ಕಾರ್ಯಕ್ರಮ ಮತ್ತು ಪ್ರದರ್ಶನವನ್ನು ಸನ್ಮಾನ್ಯ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ, ಶಾಸಕರು, ಬ್ಯಾಡಗಿ ವಿಧಾನಸಭಾ ಕ್ಷೇತ್ರ ಇವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ದೇಶವು ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಅಗ್ರ ಸ್ಥಾನದಲ್ಲಿದ್ದು ಅದರ ಶ್ರೇಯ ಉತ್ತಮ ತಳಿಯ ರಾಸುಗಳು,ಹಾಲು ಉತ್ಪಾದಕರು ಮತ್ತು ಪಶುಸಂಗೋಪನಾ ಇಲಾಖೆ ಹಾಗೂ ಹಾಲು ಸಹಕಾರಿ ಸಂಘಗಳಿಗೆ ಸಲ್ಲುತ್ತದೆ.

      ರೈತ ಬಾಂಧವರು ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ರಾಸುಗಳನ್ನು ಉತ್ತಮ ಪಾಲನೆ ಪೋಷಣೆ ಮಾಡಿ  ವೈದ್ಯರುಗಳ ತಾಂತ್ರಿಕ ಪರಿಣಿತಿಯನ್ನು ಸದುಪಯೋಗ ಪಡಿಸಿಕೊಂಡು ವೈಜಾನಿಕವಾಗಿ ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕರೆನೀಡಿದರು . ಡಾ.ಶಶಿಧರ ಬಳ್ಳಾರಿ, ಸಹಾಯಕ ಪ್ರಾಧ್ಯಾಪಕರು, ಪಶು ಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸದರಿ ಕಾರ್ಯಕ್ರಮದ ಬಗ್ಗೆ ಎಲ್ಲ ರೈತ ಬಾಂಧವರಿಗೂ ತರಬೇತಿ ನೀಡಿ ರೈತರೇ ದೇಶದ ಬೆನ್ನೆಲುಬು ಅದೇ ರೀತಿ ರೈತನ ಬೆನ್ನೆಲುಬು ಜಾನುವಾರುಗಳಾಗಿದ್ದು ನಮ್ಮ ಇಲಾಖೆಯ ಪಶುವೈದ್ಯರ ಮಾರ್ಗದರ್ಶನದಲ್ಲಿ ಉತ್ತಮ ತಳಿಯ ರಾಸುಗಳನ್ನು ಸಾಕಿ ಇಲಾಖೆಯ ಇತರೇ ಅನುಕೂಲಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಎಲ್ಲರಿಗೂ ಮನವಿ ಮಾಡಿದರು.
ಮಾನ್ಯ ಶಾಸಕರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ತಜ ಪಶುವೈದ್ಯರುಗಳಿಂದ ಆಯ್ಕೆಯಾದ ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ವಿತರಣೆಯನ್ನು ನೆರವೇರಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭೀಮಪ್ಪ. ಜೈ. ಭೀಮಾನಾಯ್ಕರ, ಅಧ್ಯಕ್ಷರು ಗ್ರಾಮ ಪಂಚಾಯತ, ಕುಳೇನೂರ ಇವರು ವಹಿಸಿದ್ದರು. ಶ್ರೀ ಕರಿಯಪ್ಪ ಮ. ಉಂಡಿ ಅಧ್ಯಕ್ಷರು, ತಾಲೂಕ ಪಂಚಾಯತ,ಹಾವೇರಿ, ಶ್ರೀಮತಿ ಸಾವಿತ್ರಮ್ಮ ಮ. ಮರಡೂರ ಉಪಾಧ್ಯಕ್ಷರು, ತಾಲೂಕ ಪಂಚಾಯತ್, ಹಾವೇರಿ, ಶ್ರೀ ಯೋಗೇಶಪ್ಪ ಹೋ. ಮರಿಲಿಂಗಣ್ಣನವರ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಕುಳೇನೂರ, ಶ್ರೀ ರೇವಣಪ್ಪ ಮತ್ತಿಹಳ್ಳಿ, ಅಧ್ಯಕ್ಷರು, ಹಾಲೂ ಉತ್ಪಾದಕರ ಸಹಕಾರಿ ಸಂಘ, ಕುಳೇನೂರ, ಶ್ರೀ ಪ್ರಕಾಶ .ಬ. ಗುಂಡಜ್ಜ ನವರ , ಸದಸ್ಯರು, ತಾಲೂಕ ಪಂಚಾಯತ, ಹಾವೇರಿ, ಶ್ರೀ ಎಂ.ಸಿ ಹಾವೇರಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರು, ದೇವಿಹೊಸೂರ, ಶ್ರೀ ಸಣ್ಣಪ್ಪ ಮಾಳಿ, ಎ.ಪಿ.ಎಂ.ಸಿ ನಿರ್ದೇಶಕರು, ಡಾ.ರಾಜೀವ್ ಎನ್. ಕೂಲೇರ, ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರ ಕಛೇರಿ, ಪಶುಪಾಲನಾ ಇಲಾಖೆ, ಹಾವೇರಿ ಇವರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.

       ಡಾ.ಪಿ.ಎನ್ ಹುಬ್ಬಳ್ಳಿ ಸಹಾಯಕ ನಿರ್ದೇಶಕರು, ಇವರು ಸ್ವಾಗತಿಸಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಡಾ.ಗಂಗಾಧರ ಸುಕ್ತೆ ಇವರು ನಿರ್ವಹಿಸಿದರು.

        ವೈದ್ಯರುಗಳಾಗಿ ಡಾ.ನೀಲಕಂಠ ಅಂಗಡಿ, ಡಾ.ಹೆಚ್.ಬಿ.ಸಣ್ಣಕ್ಕಿ, ಡಾ.ಪವನ ಬಿ.ಎಲ್, ಡಾ.ನಾಗರಾಜ ಜಲ್ಲೇರ, ಡಾ.ಹಳಕಟ್ಟಿ, ಡಾ.ಅಮೀತ್ ಪುಠಾಣಿಕರ, ಡಾ. ಬೀರೇಶ ಸಣ್ಣಪುಟ್ಟಕ್ಕನವರ, ಡಾ.ಪರಮೇಶ ಎಲೇದಹಳ್ಳಿ, ಡಾ. ರಂಗನಾಥ ಗುಡಿಸಾಗರ, ಡಾ.ಯುವರಾಜ ಚೌಹಾಣ, ಡಾ. ರಾಘವೇಂದ್ರ ಕಿತ್ತೂರ, ಡಾ.ಮಹೇಶ, ಇವರು ಆಗಮಿಸಿ ಉತ್ತಮ ತಳಿಯ ರಾಸುಗಳ ಆಯ್ಕೆಯನ್ನು ಮಾಡಿಕೊಟ್ಟರು.

         ಕಾರ್ಯಕ್ರಮದಲ್ಲಿ ಹಾವೇರಿ ತಾಲೂಕಿನ ಸಿಬ್ಬಂದಿಗಳಾದ ಶ್ರೀ ಎಸ್.ಎಫ್ ಕರಿಯಪ್ಪನವರ, ಶ್ರೀ ಕೆ.ಬಿ ಕುನ್ನೂರ, ಶ್ರೀ ಬಿ,ಐ ಆಡೂರ, ಶ್ರೀ ಬಿ.ಎಸ್ ಕಲಕೋಟಿ, ಶ್ರೀ ಮೆಹಬೂಬ ಪಾಷಾ, ಶ್ರೀ ಪ್ರದೀಪ ಏಕಲಾರೆ, ಶ್ರೀ ಬಿ.ವೈ ಬಾರಕೇರ, ಹಾಗೂ ಸಿಬ್ಬಂದಿಯವರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಸಹಕರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link