ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌

ಮೈಸೂರು: ಮೇ 2  ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಚೀನಾದಲ್ಲಿ ಕೊರೊನಾದಿಂದಾಗಿ ಭಾರತಕ್ಕೆ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಬ್ರಿಡ್ಜ್ ಕೋರ್ಸ್‌ ಘೋಷಣೆ ಮಾಡಿತ್ತು. ಇದಕ್ಕೆ ಕಳೆದ 24 ಗಂಟೆಯಲ್ಲೇ ವಿದ್ಯಾರ್ಥಿಗಳಿಂದಲೇ ಆಗಾಧವಾಗ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 511 ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಉತ್ಸುಕರಾಗಿದ್ದಾರೆ.ಭಾರತದಾದ್ಯಂತ 511 ವಿದ್ಯಾರ್ಥಿಗಳು ಅದರಲ್ಲಿ 321 ಕರ್ನಾಟಕದವರಾಗಿದ್ದು, ಈ ಕೋರ್ಸ್‌ ಸೇರಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕೋರ್ಸ್‌ನ್ನು ಮೇ ಎರಡನೇ ವಾರದಿಂದ ಪ್ರಾರಂಭಿಸುವ ನಿರೀಕ್ಷೆಯಿದೆ. … Continue reading ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌