ಬೆಂಗಳೂರು:
ಯಾರೇ ಹಲಾಲ್ ಮಾಂಸ ನಿಷೇಧ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನೆ ಮಾಡುವಂತ ಪೋಸ್ಟ್, ವೀಡಿಯೋ ಹಾಕಿದ್ರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ತಾರೆ. ಪೊಲೀಸರು ಅದರ ಮೇಲೆ ನಿಗಾ ಇಟ್ಟಿದ್ದಾರೆ. ಪ್ರಚೋದನೆ ಹೇಳಿಕೆ ಕೊಟ್ರೆ ಪರಿಗಣಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಒಂದು ಸಮುದಾಯಕ್ಕೆ ಈ ಹೇಳಿಕೆಗಳಿಂದ ಏನೋ ಆಗುತ್ತೆ ಅಂತ ಭಾವಿಸುವ ಅಗತ್ಯವಿಲ್ಲ. ಒಂದು ಸಮುದಾಯ ಹಲಾಲ್ ಮಾಡದೇ ಮಾಂಸ ಮಾರಾಟ ಮಾಡಲ್ಲ ಅನ್ನುತ್ತೆ. ಇನ್ನೊಂದು ಸಮುದಾಯ ಹಲಾಲ್ ಮಾಂಸ ನಮ್ಮ ದೇವರಿಗೆ ಆಗಲ್ಲ ಅನ್ನುತ್ತೆ. ಈಗಿನ ವಿವಾದದ ಕೇಂದ್ರವೇ ಇದು. ಮೊದಲು ಹಿಜಾಬ್ ನಿಂದ ಆಕ್ಷನ್ ಶುರು ಆಯಿತು. ಇನ್ನೊಬ್ರು ಅದಕ್ಕೆ ರಿಯಾಕ್ಷನ್ ಮಾಡ್ತಿದ್ದಾರೆ. ಇದು ಆದಷ್ಟೂ ತಣ್ಣಗೆ ಆಗಬೇಕು. ಶಾಂತಿ ಸುವ್ಯವಸ್ಥೆ ಕದಡದಂತೆ ಎಲ್ರೂ ಎಚ್ಚರ ವಹಿಸಬೇಕು ಎಂದರು.
ಗೃಹ ಇಲಾಖೆ ಎಲ್ಲವನ್ನೂ ಗಮನಿಸ್ತಿದೆ. ಯುಗಾದಿ ಹಿನ್ನೆಲೆ ಹಲಾಲ್ ಮಾಂಸ ಖರೀದಿ ಮಾಡಲ್ಲ ಅನ್ನೋ ಹೇಳಿಕೆಗಳು ಸಹಜವಾಗಿದೆ. ಹಲಾಲ್ ನಮ್ಮ ದೇವರಿಗೆ ಆಗಲ್ಲ ಅಂತ ಅವ್ರು ಖರೀದಿಸಲ್ಲ ಅಂತ ರಿಯಾಕ್ಷನ್ ಮಾಡ್ತಿದ್ದಾರೆ. ಇದು ಇದುವರೆಗೂ ಇರಲಿಲ್ಲ. ಇದು ವಿಕೋಪಕ್ಕೆ ಹೊಗಬಾರದು, ಚರ್ಚೆ ನಡೆಯೋದ್ರಲ್ಲಿ ತಪ್ಪಿಲ್ಲ. ಸಿ ಟಿ ರವಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.
ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿಸುದ್ದಿ : ತಿಂಗಳಲ್ಲಿ 1 ದಿನ `ಸಿರಿಧಾನ್ಯ’ದ ಬಿಸಿಯೂಟ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ