ಅಮೆರಿಕದ ಡ್ರೋನ್ ಹೊಡೆದುರುಳಿಸಿದ್ದು ಶಕ್ತಿ ಪ್ರದರ್ಶನಕ್ಕಲ್ಲ-ಇರಾನ್‍

ಮಾಸ್ಕೋ

   ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಇರಾನ್‍ ತನ್ನ ಕ್ಷಿಪಣಿ ಶಕ್ತಿಗಿಂತ ತಾಂತ್ರಿಕ ಸಾಮರ್ಥ್ಯವನ್ನು ತೋರಿಸುತ್ತಿದೆ ಪವಿತ್ರ ರಕ್ಷಣಾ ಸಪ್ತಾಹ ಆಚರಣೆಯ ಇರಾನ್‌ ಕೇಂದ್ರ ಸಮಿತಿ ಅಧ್ಯಕ್ಷ ಬಹಮಾನ್ ಕಾರ್ಗರ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಬುಧವಾರ ವರದಿ ಮಾಡಿದೆ .

   ಅಮೆರಿಕದ ನಾರ್ತ್ರೋಪ್ ಗ್ರಮ್ಮನ್ ಆರ್ ಕ್ಯು -4 ಜಾಗತಿಕ ಕಣ್ಗಾವಲು ಡ್ರೋನ್ ಅನ್ನು ಕರಾವಳಿಯ ಹಾರ್ಮೋಜ್‍ಗನ್‍ ಪ್ರಾಂತ್ಯದಲ್ಲಿ ಪರ್ಷಿಯನ್ ಕೊಲ್ಲಿಗೆ ಅಭಿಮುಖವಾಗಿ ಹೊಡೆದುರಿಳಿಸಿರುವುದಾಗಿ ಕಳೆದ ಜೂನ್‌ನಲ್ಲಿ ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ತಿಳಿಸಿತ್ತು. ಇದರಿಂದ ಇರಾನ್‍-ಅಮೆರಿಕ ನಡುವೆ ಇತ್ತೀಚೆಗೆ ಉದ್ವಿಗ್ನತೆ ಹೆಚ್ಚುತ್ತಿದೆ. ತಟಸ್ಥ ವಾಯುಪ್ರದೇಶದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

   ಇರಾನ್‍ ಮೆಹ್ರ್ ಸುದ್ದಿ ಸಂಸ್ಥೆ ಉಲ್ಲೇಖಿಸಿದಂತೆ, ಕಾರ್ಗರ್ ಪ್ರಕಾರ, ಐಆರ್ ಜಿಸಿ ಅಮೆರಿಕ ಡ್ರೋನ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ಘಟನೆ ಇರಾನ್‍ನನ್ನು ತಾಂತ್ರಿಕ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯವನ್ನು ಬೆರಗುಗೊಳಿಸಿತ್ತು.

   ಇರಾನ್‌ನ ಗಡಿಗಳನ್ನು ಉಲ್ಲಂಘಿಸಿದರೆ ಅಮೆರಿಕ ಡ್ರೋನ್‌ನಂತೆಯೇ ಅಂತಹ ಉಪಕರಣಗಳು ನಾಶವಾಗುತ್ತವೆ ಎಂದು ಎಂದು ಕಾರ್ಗರ್ ಸಂಭಾವ್ಯ ಅತಿಕ್ರಮಣದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್‍ ನಡುವಿನ ಸಂಬಂಧಗಳು ಇತ್ತೀಚೆಗೆ ಉದ್ವಿಗ್ನಗೊಂಡಿರುವುದು ಇರಾನ್ ನ ಪರಮಾಣು ಒಪ್ಪಂದದಿಂದ ಮಾತ್ರವಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ನೆರೆ ಪ್ರದೇಶಗಳ ಪರಿಸ್ಥಿತಿಯಿಂದಲೂ ಉಲ್ಬಣಗೊಂಡಿದೆ. ಈ ಪ್ರದೇಶದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಹಲವು ತೈಲ ಟ್ಯಾಂಕರ್‌ಗಳನ್ನು ಸ್ಫೋಟಗಳಿಂದ ನಾಶ ಪಡಿಸಲಾಗಿದೆ. ಈ ಘಟನೆಗಳಿಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಇರಾನ್ ಅನ್ನು ದೂಷಿಸಿವೆ, ಆದರೆ ಈ ಆರೋಪಗಳನ್ನು ಇರಾನ್‍ ನಿರಾಕರಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link