ಸಿನಿಮಾ ಇಂಡಸ್ಟ್ರೀಯಲ್ಲಿ ಕ್ಯಾಸ್ಟಿಂಗ್ ಕೌಚ್ ಪ್ರತಿದಿನ ಸುದ್ದಿಯಾಗುತ್ತಲೇ ಇದೆ. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದರೆ, ನಟಿಯರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ದೂರುಗಳು ಕೇಳಿಬರುತ್ತಲೇ ಇದೆ. ಅಷ್ಟೇ ಅಲ್ಲದೆ ಈ ಬಗ್ಗೆ ಕೆಲವರು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದೂ ಇದೆ.
‘ಕ್ಯಾಸ್ಟಿಂಗ್ ಕೌಚ್ ‘ ಆರೋಪಗಳ ಕುರಿತಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅನೇಕ ಮಹಿಳೆಯರೊಂದಿಗೆ ಕ್ಯಾಸ್ಟಿಂಗ್ ಕೌಚ್ ವಿರುದ್ದದ ಧ್ವನಿ ಹೆಚ್ಚಾಗುತ್ತಿದೆ.
ಏನಿದು ಕ್ಯಾಸ್ಟಿಂಗ್ ಕೌಚ್?
ಸಿನಿಮಾದಲ್ಲಿ ಅವಕಾಶ ನೀಡಲಿಕ್ಕಾಗಿ ಕಲಾವಿದೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೆ ಚಿತ್ರರಂಗದ ಪರಿಭಾಷೆಯಲ್ಲಿ ‘ಕ್ಯಾಸ್ಟಿಂಗ್ ಕೌಚ್’ ಎಂದು ಹೆಸರು.
ಇತ್ತೀಚಿನ ದಿನಗಳಲ್ಲಿ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಯಾಂಡಲ್’ವುಡ್’ನ ನಟಿಯೊಬ್ಬಳು ತನಗೂ ಕಾಸ್ಟಿಂಗ್ ಕೌಚ್ ಆಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
“ಕ್ಯಾಸ್ಟಿಂಗ್ ಕೌಚ್ ಹಗರಣಗಳಲ್ಲಿ ಹೆಚ್ಚು ಕೇಳಿಸುವುದು ನಿರ್ಮಾಪಕ, ನಿರ್ದೇಶಕ, ನಾಯಕ ನಟರ ಹೆಸರುಗಳು. ಅದೇ ರೀತಿ ತನಗೂ ಸಹಾ 15 ವರ್ಷ ವಯಸ್ಸಿನಲ್ಲೇ ಚಿತ್ರರಂಗದ ಗಣ್ಯರಿಂದ ಕ್ಯಾಸ್ಟಿಂಗ್ ಕೌಚ್ ನ ಕಹಿ ಅನುಭವ ಆಗಿದೆ ಎಂದು ಕನ್ನಡ ಸಿನಿಮಾಗಳಾದ ದಯವಿಟ್ಟು ಗಮನಿಸಿ, ಎರಡೆನೇ ಸಲ, ಮಾಮು ಟೀ ಅಂಗಡಿ, ಎರಡನೇ ಸಲ ಸಿನಿಮಾ ಖ್ಯಾತಿಯ ಕನ್ನಡದ ನಟಿ ಸಂಗೀತಾ ಭಟ್ ಸಾಮಾಜಿಕ ಜಾಲತಾಣದಲ್ಲಿ(ಇನ್ಸ್ಟಾ ಗ್ರಾಮ್) ಬರೆದುಕೊಳ್ಳುವ ಮೂಲಕ ತನ್ನ 10 ವರ್ಷಗಳ ಚಿತ್ರರಂಗದ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
