ಕೂಡ್ಲಿಗಿ:
ಮನುಷ್ಯ ಎಷ್ಟೇ ಜಾಗತೀಕರಣದಲ್ಲಿ ವಿಜ್ಞಾನದಲ್ಲಿ ಕ್ರಾಂತಿ ಹೊಂದಿದ್ದರೂ ದೇವರ ಮುಂದಿ ಎನೂ ಇಲ್ಲ. ಮನುಕುಲದ ಸರ್ವತೋಮುಖ ಅಭಿವೃಧ್ದಿ ಹಾಗೂ ಜಗತ್ತು ಶಾಂತಿಯುತವಾಗಿರಲು ಧಾರ್ಮಿಕತೆಯಲ್ಲಿ ಸರ್ವರೂ ಶ್ರಧ್ದೆಯಿಂದಿರಬೇಕು ಎಂದುಮೌಲಾನಾ ಇದ್ರೀಸ್ ಉಮ್ರಿ ಅವರು ನುಡಿದರು. ಅವರು ಪಟ್ಟಣದ ಮಜೀಧೆ ರಹೆಮಾನೀಯ ಜಮೀಯತೇ ಅಹ್ಲೇ ಹದೀಸ್ ನಲ್ಲಿ ಮಗರೀಬ್ ನಿಮದ ಇಶಾ ವರೆಗೆ ಜರುಗಿದ ಧಾರ್ಮಿಕ ಸಭೆಯನ್ನುಧ್ದೇಶಿಸಿ ಖುರಾನ್ ಮತ್ತು ಹದೇಸ್ ಕುರಿತು ಭೋಧನೆ ಮಾಡಿದರು.
ಮನುಷ್ಯ ಏನೆಲ್ಲಾ ಸಾಧನೆ ಮಾಡಿದರೂ ಪ್ರಕೃತಿ ಮುಂದೆ ಕುನ್ನಿ, ದೇವರಿಗೆ ಯಾವುದೇ ನಿರ್ಧಿಷ್ಠವಾದ ರೂಪಗಳಿಲ್ಲ, ಆತನು ಪ್ರಕೃತಿಯಲ್ಲಿರುವ ಬಹುದೊಡ್ಡ ಅದೃಶ್ಯ ಶಕ್ತಿಯಾಗಿದ್ದು, ಜಗತ್ತಿಗೆ ನಮ್ಮನ್ನು ಕರೆತಂದಿದ್ದಕ್ಕಾಗಿ ಆತನನ್ನು ದಿನದ 5 ಹೊತ್ತು ಶ್ರಧ್ದೆಯಿಂದ ಆರಾಧಿಸುವ ಮೂಲಕ ಆತನಿಗೆ ಕೃತ್ನತೆಯನ್ನು ಸರ್ವರೂ ಸಲ್ಲಿಸಬೇಕಿದೆ ಮತ್ತು ಧಾರ್ಮಿಕ ಗ್ರಂಥ ಖುರಾನನ್ನು ಸರ್ವರೂ ಗೌರವಿಸಿ ಪಠಿಸಬೇಕು.
ಅದರಲ್ಲಿರುವ ಧಾರ್ಮಿಕ ಅಂಶಗಳನ್ನು ಜೀವಿತಾವಧಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು. ಧರ್ಮ ಪರಿಪಾಲನೆಯಿಂದ ಮನುಕುಲದ ಶಾಂತಿ ಸಾಧ್ಯ, ಜೀವನ ಸಾರ್ಥಕತೆಗೆ ಮಕ್ಕಳಿಂದ ವೃಧ್ದರೂ ಕೂಡ ಧಾರ್ಮಿ ಶ್ರಧ್ದೆಯನ್ನು ಹೊಂದಬೇಕಿದೆ, ಬಡವ ಶೋಷಿತರ ನ್ನು ಕಡೆಗಾಣಿಸದೇ ಅವರಿಗೆ ಸಹಕರಿಸಿ ಅವರಲ್ಲಿಯೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಿದೆ,ಇದರಿಂದಾಗಿ ಎಲ್ಲರೂ ಎಲ್ಲಾರೀತಿಯಿಂದ ನೆಮ್ಮದಿ ಅಭಿವೃಧ್ದಿ ಸಾದ್ಯ ಎಂದರು.
ಸಭೆಯ ವೇದಿಕೆಯಲ್ಲಿ ಮಕ್ಬುಲ್ ಮೌಲಾನಾಜಾಮೀ,ಅಬ್ದುಲ್ ಆಕೀರ್‍ಮಹಮದೀ,ಅಬ್ದುಲ್ ಸಲಾಂಉಮ್ರೀ,ಅಖೀಲೌಹಮಾದ್ ಮೌಲಾನಾ,ಅಬ್ದುಲ್ ರಹೀಂಸಗ್ರೀ ಜಾಮೀ ಉಪಸ್ಥಿತರಿದ್ದರು,ಸಭೆಯಲ್ಲಿ ನೂರಾರು ಧಾರ್ಮಿಕ ಮಖಂಡರು ಧಾರ್ಮಿಕ ಶ್ರದ್ದಾಳುಗಳು,ಮಕ್ಕಳು ಮಹಿಳೆಯರು ಭಾಗವಹಿಸಿದ್ದರು.