ದಾವಣಗೆರೆ :
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸ್ವೀಪ್ ಕಾರ್ಯಕ್ರಮದಡಿ ಇಲ್ಲಿನ ಮಹಾನಗರ ಪಾಲಿಕೆಯ ಕಟ್ಟಡದ ಮೇಲೆ ಭಾನುವಾರ ಕಡ್ಡಾಯ ಮತದಾನದ ಸಂದೇಶ ವಿರುವ ಬೃಹತ್ ಬಲೂನ್ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್. ಶಿವಮೂರ್ತಿ ಅವರು ಹಾರಿಸಿದ ಬಲೂನ್ ಮೇಲೆ ಜ್ಞಾನಪೀಠ ಪುರಸ್ಕತ ಡಾ. ಚಂದ್ರಶೇಖರ್ ಕಂಬಾರ್ ಇವರ ಛಾಯಾಚಿತ್ರದೊಂದಿಗೆ “ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ, ಮತದಾನ ದೇಶವನ್ನು
ರೂಪಿಸುತ್ತದೆ…, ತಪ್ಪದೇ ಎಲ್ಲರೂ ಮತದಾನ ಮಾಡಿ” ಎಂಬ ಸಾಲುಗಳು ಮತದಾರರಲ್ಲಿ ಮತದಾನದ ಮಹತ್ವವನ್ನು ಸಾರಿದವು
ಮತ್ತೊಂದೆಡೆ ಭಾರತೀಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಇವರ ಛಾಯಾಚಿತ್ರದೊಂದಿಗೆ “ ಎಲ್ಲರೂ ಆಡಿದ್ರೆ ಮ್ಯಾಚ್ ಗೆಲ್ಲುತ್ತೇವೆ, ಪ್ರತಿಯೊಬ್ಬರು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಘೋಷಣಾ ಸಾಲುಗಳು ಸೇರಿದಂತೆ ಬಲೂನ್‍ನ ಸುತ್ತಲು ಕಡ್ಡಾಯ ಮತದಾನದ ಘೋಷಣೆಗಳು ಮತದಾರರಲ್ಲಿ ಜಾಗೃತಿ ಮೂಡಿಸಿದವು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಹಾಗೂ ದಾವಣಗೆರೆ ದಕ್ಷಿಣ ಸಹಾಯಕ ಚುನಾವಣಾಧಿಕಾರಿ ವಿರೇಂದ್ರ ಕುಂದಗೋಳ, ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಭೀಮ ನಾಯ್ಕ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ