ತುಮಕೂರು
ಪುಟ್ಟ ಪುಟ್ಟ ಹೆಜ್ಜೆಗಳೂ ದೊಡ್ಡ ಸಾಧನೆಯ ದಾರಿಯಲ್ಲಿ ಗುರಿ ತಲುಪಿಸಬಲ್ಲವು ಕಾರ್ಪೋರೇಟ್ ಕ್ಷೇತ್ರದ ಮಾನದಂಡಗಳು ಗ್ರಾಮೀಣ ಕಾಲೇಜುಗಳನ್ನು ಅಳೆಯುವ ಮಾನದಂಡಗಳಾಗಿರುವುದು ಅವೈಜ್ಞಾನಿಕ ಮತ್ತು ಅಸಹಜ. ಇದು ಸಾಮಾಜಿಕ ಸಮಾನತೆಯನ್ನು ಅಣಕಿಸುವಂತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಆದ ಡಾ. ಆರ್.ಕೆ.ರಮೇಶ್ ಬಾಬು ಅಭಿಪ್ರಾಯಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಷ್ಕøತ ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆಯ ಚೌಕಟ್ಟು ಎಂಬ ವಿಷಯದ ಮೇಲೆ ಕಾಲೇಜಿನ ಐ.ಕ್ಯೂ.ಎ.ಸಿ.ಘಟಕವು ಅಧ್ಯಾಪಕರುಗಳಿಗೆ ಆಯೋಜಿಸಿದ ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಚಿತ್ರದುರ್ಗದ ಪ್ರೊ. ಕೆ. ಸಜ್ಜಾತ್‍ರವರು, ಒಳಗೊಳ್ಳುವಿಕೆ, ಸಮಾನತೆ, ಗುಣಮಟ್ಟ ಶಿಕ್ಷಣದ ವರ್ತಮಾನದ ಆಶಯಗಳು. ಗುಣಮಟ್ಟದ ವ್ಯಾಖ್ಯಾನ ಎಂಬುದು ಕಟ್ಟಡ, ಪೀಠೋಪಕರಣಗಳು ಅಷ್ಟೇ ಅಲ್ಲ, ಹೃದಯಾಂತರಾಳದಿಂದ ಹೊಮ್ಮುವುದು. ಅಧ್ಯಾಪನ ಮಾಡುತ್ತ ಕಾಲಕಾಲಕ್ಕೆ ಪರಿಷ್ಕರಣೆ ಮಾಡಿಕೊಳ್ಳುವುದು, ಅನ್ಯಜ್ಞಾನ ಶಿಸ್ತುಗಳೊಂದಿಗೆ ಅನುಸಂಧಾನ, ಮುಕ್ತ ಮನಸ್ಸಿನಿಂದ ನೋಡುವುದು, ಹೊಸ ಆಲೋಚನೆಗಳಿಗೆ ತನ್ನ ಮನಸ್ಸುಗಳನ್ನು ಮುಕ್ತವಾಗಿಸಿಕೊಳ್ಳುವುದೇ ಆಗಿದ್ದು, ಇದು ವರ್ತಮಾನದ ಶಿಕ್ಷಣದ ಅಗತ್ಯವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯಲಹಂಕ ಕಾಲೇಜಿನ ಡಾ. ಕೆ. ಮಹೇಶ್ ಮಾತನಾಡಿ, ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶ ಹೃದಯ ಮತ್ತು ಮೆದುಳು ಇದ್ದಂತೆ. ಸಂತೋಷದ ಸಂಗತಿ ಎಂದರೆ ರಾಷ್ಟ್ರದಲ್ಲೇ ಕರ್ನಾಟಕದ ಹೆಚ್ಚು ಕಾಲೇಜುಗಳು ನ್ಯಾಕ್‍ನಿಂದ ಮಾನ್ಯತೆ ಪಡೆದು ಮತ್ತು ಗುಣಮಟ್ಟದ ಸಾಧನೆಯಲ್ಲಿ ಎರಡನೇ ಸ್ಥಾನದಲ್ಲಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ತಿಮ್ಮನಹಳ್ಳಿ ವೇಣುಗೋಪಾಲ್‍ರವರು, ಕಾಲೇಜಿನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಕುರಿತು ಅಧ್ಯಾಪಕರು ಸ್ವವಿಮರ್ಶೆ, ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಶೈಕ್ಷಣಿಕ ಆಗುಹೋಗುಗಳ ವಿಮರ್ಶೆ ಮಾಡುವ ಜರೂರು ಇದೆ. ಅಧ್ಯಾಪಕರು ತಮ್ಮೊಳಗಿನ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಲೇಜಿನ ಉನ್ನತಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವುದು, ಸಾಮಾಜಿಕ ನ್ಯಾಯವನ್ನು ಶಿಕ್ಷಣದ ತುಡಿತವನ್ನಾಗಿಸುವ ಜವಾಬ್ದಾರಿ ಇದೆ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಎಸ್.ಟಿ.ರಂಗಪ್ಪ ಸ್ವಾಗತಿಸಿ, ಇಂಗ್ಲೀಷ್ ಅಧ್ಯಾಪಕಿ ಸುಷ್ಮಾ ಕಾರ್ಯಕ್ರಮ ರ್ನಿಹಿಸಿದರು. ವಾಣಿಜ್ಯಶಾಸ್ತ್ರ ಅಧ್ಯಾಪಕಿ ದರ್ಶನ ವಂದನಾರ್ಪಣೆ ಮಾಡಿದರು. ಡಾ.ನಳಿನ, ಡಾ. ಚಿಕ್ಕಣ್ಣ, ಸತೀಶ್ ಗೌಡ.ಎಸ್. ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
