ಎಂ ಎನ್ ಕೋಟೆ :
ಅಳಿಲಘಟ್ಟ ಗ್ರಾಮದಲ್ಲಿ ಡಾ.ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆಯ ಅಂಗವಾಗಿ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.ಪುಣ್ಯಸ್ಮರಣೆಯ ಅಂಗವಾಗಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗಿತ್ತು.ಸಾವಿರಾರು ಭಕ್ತರು ಪಾಲ್ಗೊಂಡು ದಾಸೋಹವನ್ನು ಸ್ವೀಕರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ ಇಂದು ಸಿದ್ದಗಂಗಾ ಶ್ರೀಗಳ ಪುಣ್ಯ ಸ್ಮರಣೆ ಅಂಗವಾಗಿ ಭಕ್ತಾಧಿಗಳಿಗೆ ಮಹಾ ದಾಸೋಹವನ್ನು ಏರ್ಪಡಿಸಲಾಗಿದೆ.ಎಲ್ಲ ಭಕ್ತರು ದಾಸೋಹವನ್ನು ಸ್ವೀಕರಿಸಿದರು.
ಇಂದು ರಾಜ್ಯದಂತ ಶ್ರೀಗಳ ಪುಣ್ಯ ಸ್ಮರಣೆಯನ್ನು ಮಾಡುತ್ತಿದ್ದಾರೆ.ಸಿದ್ದಗಂಗಾ ಶ್ರೀಗಳಿಗೆ ಈಗಲಾದರೂ ಭಾರತರತ್ನವನ್ನು ನೀಡಬೇಕು.ನಮ್ಮ ರಾಜ್ಯಕ್ಕೆ ಶ್ರೀಗಳು ಮಾದರಿಯಾಗಿದ್ದಾರೆ.ಸಂಬಂಧಪಟ್ಟ ಕೇಂದ್ರಸರ್ಕಾರ ಹಾಗೂ ಸಿ ಎಂ ಕುಮಾರಸ್ವಾಮಿಯವರು ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಲೋಕೇಶ್, ಚಿದಾನಂದ್, ಪುಟ್ಟರಾಜು,ದೀಕ್ಷೀತ್,ನಾಗೇಶ್, ಬೀಮಾಣ್ಣ,ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
