ಬಿಜೆಪಿ ಶಾಸಕರನ್ನು ರೆಸಾಟ್ಸ್ ರ್ನಲ್ಲಿ ಕೂಡಿ ಹಾಕಿರುವುದು ಅಸಹ್ಯದ ಕೆಲಸ : ದೇವೇಗೌಡ

ಬೆಂಗಳೂರು

       ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ತಮ್ಮ ಶಾಸಕರನ್ನು ರೆಸಾಟ್ಸ್ ರ್ನಲ್ಲಿ ಕೂಡಿ ಹಾಕಿರುವುದು ಅಸಹ್ಯದ ಕೆಲಸ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ

      ಪದ್ಮನಾಭನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉರುಳಿಸುತ್ತೇನೆ ಎನ್ನುವುದು ಯಡಿಯೂರಪ್ಪ ಅವರ ಭ್ರಮೆಯಾಗಿದೆ. ಆದರೆ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಶಾಸಕರೆಲ್ಲರೂ ಅವರವರ ಕ್ಷೇತ್ರದಲ್ಲಿದ್ದಾರೆ. ಯಾರೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

       ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೆಲ್ಲವೂ ದೈವದ ಆಟ. ಹೀಗಾಗಿ ತಾವು ಯಾವುದರ ಬಗ್ಗೆಯೂ ಗಮನ ಹರಿಸಿಲ್ಲ. ಆಗುತ್ತಿರುವುದೆಲ್ಲವೂ ಯಾರ ಕೈಯಲ್ಲಿಯೂ ಇಲ್ಲ. ಜನತೆಯ ಆಶೀರ್ವಾದ, ಕಾಂಗ್ರೆಸ್ ಸಹಕಾರದಿಂದ ಪಕ್ಷ ಅಧಿಕಾರದಲ್ಲಿದೆ. ಸರ್ಕಾರ ಸುಭದ್ರವಾಗಿದೆ ಎಂದು ದೇವೇಗೌಡ ತಿಳಿಸಿದರು.

        ಯಡಿಯೂರಪ್ಪನಂತೆ ತಾವು ಭ್ರಮಾ ಲೋಕದಲ್ಲಿಲ್ಲ. ಶಾಸಕರನ್ನು ಕೂಡಿಹಾಕಿ ಆಪರೇಷನ್ ಕಮಲಕ್ಕೆ ಕೈಹಾಕುವುದು ರಾಷ್ಟ್ರೀಯ ಪಕ್ಷಕ್ಕೆ ಮರ್ಯಾದೆ ತರುವುದಿಲ್ಲ. ಬಿಜೆಪಿ ನಾಯಕರು ಮರ್ಯಾದೆ ಬಿಟ್ಟು, ಐವತ್ತು ಕೋಟಿ ನೂರು ಕೋಟಿ ಹಣದ ಆಮಿಷದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ ರಾಜಕೀಯ..? ಎಂದು ಪ್ರಶ್ನಿಸಿದರು..ದಿನವೂ ಭಾಷಣ ಮಾಡುವ ಮೋದಿ, ತಮ್ಮ ಪಕ್ಷ ಹೀಗೆ ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ ಎಂದು ದೇವೇಗೌಡ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link