ಹಾಲಿ ಶಾಸಕರ ವಿರುದ್ಧ ಹರಿಹಾಯ್ದ ದೊಡ್ಡಾಘಟ್ಟ ಚಂದ್ರೇಶ್

ತುರುವೇಕೆರೆ:

     ಹಾಲಿ ಶಾಸಕ ಮಸಾಲಾಜಯರಾಮ್ ಪೋಲಿಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿರುವುದು ಅವರ ಅದಿಕಾರದ ಅಸಹಾಯಕತೆಯನ್ನು ಬಿಂಬಿಸುತ್ತದೆ ಎಂದು ರಾಜ್ಯ ಯುವ ಜೆಡಿಎಸ್‍ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.

      ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕರು ಶಾಸನಬದ್ದ ಅಧಿಕಾರ ಚಲಾಯಿಸದೇ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ. ಜನ ಸಾಮಾನ್ಯರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳುವುದು ಅವರ ಸ್ಥಾನಕ್ಕೆ ಘನತೆ ತರುವುದಿಲ್ಲ.

      ತಾಲೂಕಿನ ಪ್ರಥಮ ಪ್ರಜೆಯೇ ಹೀಗೆ ಹೇಳಿದರೆ ಜನಸಾಮಾನ್ಯರ ಗತಿ ಏನು? ಎಂದು ಪ್ರಶ್ನಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಶಾಸಕರು ತಾಲೂಕಿಗೆ ಮಾಡಿರುವ ಸಾಧನೆ ಏನು ಎಂಬುದನ್ನು ಸಾರ್ವಜನಿಕವಾಗಿ ತಿಳಿಯವ ಅಗತ್ಯವಿದೆ. ಶಾಸಕರ ಸಾಧನೆ ಶೂನ್ಯವಾಗಿದೆ.

      ಶಾಸಕರೇ ತಮ್ಮ ಅಸಹಾಯಕತೆ ಪ್ರದರ್ಶನ ಮಾಡಿದರೆ ಆ ಸ್ಥಾನಕ್ಕೆ ಅಗೌರವ ತೋರಿ ತನ್ನ ಕರ್ತವ್ಯ ನಿರ್ವಹಿಸಲು ಶಕ್ತನಲ್ಲ ಎಂಬುದನ್ನು ತಿಳಿಸಿದಂತೆ. ವಿರೋಧ ಪಕ್ಷದವರು ಆಡಳಿತದ ಬಗ್ಗೆ ದೂರಬೇಕಿತ್ತು. ಆದರೆ ಹಾಲಿ ಶಾಸಕರೇ ಆಡಳಿತ ಹದಗೆಟ್ಟಿದೆ ಎಂದು ದೂರಿರುವುದು ದುರದೃಷ್ಠಕರ. ಆಕಸ್ಮಿಕವಾಗಿ ಶಾಸಕರಾಗಿ ಒಂದು ವರ್ಷ ಕಳೆದರೂ ಸಹ ಇನ್ನೂ ಆಡಳಿತದ ಅರಿವಿಲ್ಲದಿರುವುದು ವಿಷಾದನೀಯ.

        ಆಡಳಿತವನ್ನು ಹತೋಟಿಗೆ ತೆಗೆದುಕೊಳ್ಳಲು ವಿಫಲರಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಹೊಂದುವುದೇ ಲೇಸು ಎಂದು ಸಲಹೆ ನೀಡಿದರು.

        ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಗಿರಿಜಮ್ಮ, ಹಾವಾಳ ಕೃಷ್ಣ, ಮುಖಂಡರಾದ ಗೊಟ್ಟೀಕೆರೆ ಪ್ರಕಾಶ್, ಸೋಮೇನಹಳ್ಳಿ ಲಕ್ಷ್ಮಣ್, ಕಾಳಂಜೀಹಳ್ಳಿ ವೀರಣ್ಣ, ಪಾಲಾಕ್ಷ, ಅಭಿಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link