ಬೆಂಗಳೂರು :
ಇಂದು ಸರ್ಕಾರದಿಂದ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸದಂತೆ ಶ್ರೀಮಂತಗೌಡ ಪಾಟೀಲ್ ರನ್ನು ಕಿಡ್ ನ್ಯಾಪ್ ಮಾಡಿದ ಬಿಜೆಪಿ ಮಾಜಿ ಸಚಿವರ ವಿರುದ್ಧ ನಗರದ ಪೊಲೀಸ್ ಆಯುಕ್ತರಿಗೆ ಕಾಂಗ್ರಸ್ ಇಂದು ಸಂಜೆ ದೂರು ನೀಡಿದೆ.
ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸದಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ಅಕ್ರಮ ಬಂಧಿಸುವ ಮೂಲಕ ತಡೆದು ಆಸ್ಪತ್ರೆಗೆ ದಾಖಲು ಮಾಡಿರುವ ಲಕ್ಷ್ಮಣ ಸವದಿಯವರ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕರಾದ ಎ ಎನ್ ನಟರಾಜ್ ಗೌಡ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎಮದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
