ಹಾಲಿ ಮುಖ್ಯಮಂತ್ರಿಗಿಂತ ಹೆಚ್ಚು ಗಮನ ಸೆಳೆದ ಮಾಜಿ ಮುಖ್ಯಮಂತ್ರಿ

ಬೆಂಗಳೂರು

    ಹಾಲಿ ಮುಖ್ಯಮಂತ್ರಿ ಬಿ ಎಸ್‍ ಯಡಿಯೂರಪ್ಪ ಅವರಿಗಿಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಗಮನ ಸೆಳೆದರು.ನಗರದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ಸಮುದಾಯದಿಂದ ಆಯೋಜಿಸಿದ್ದ ‘ಸರ್ಕಾರಿ ಸೌಲಭ್ಯಗಳ ಸವಲತ್ತು’ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದು, ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಅವರಿಗಿಂತ ಹೆಚ್ಚಿನ ಮನ್ನಣೆ ನೀಡಿದಂತೆ ಕಂಡುಬಂದಿತು.

   ಕಾರ್ಯಕ್ರಮದ ಉದ್ಘಾಟಕರಾಗಿ ಯಡಿಯೂರಪ್ಪ ನಿಗದಿತ ಸಮಯಕ್ಕೆ ಆಗಮಿಸಿದರು. ವೇದಿಕೆಯಲ್ಲಿ ಬಿಜೆಪಿ ನಾಯಕರೆಲ್ಲ ಸೇರಿದ ಸ್ವಲ್ಪ ಸಮಯದ ಬಳಿಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಅವರನ್ನು ಸ್ವಾಗತಿಸಿದರು.ಪರಿಶಿಷ್ಟ ಸಮುದಾಯದವರ ಚಪ್ಪಾಳೆ ಸಿಳ್ಳೆ ಸದ್ದು ವೇದಿಕೆಯಲ್ಲಿದ್ದ ಬಿಜೆಪಿ ನಾಯಕರ ಗಮನವನ್ನು ಕೇಂದ್ರೀಕರಿಸಿತು.

    ಒಂದೇ ವೇದಿಕೆಯ ಅಕ್ಕಪಕ್ಕದಲ್ಲಿಯೇ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಆಸೀನರಾದರೂ ಸಹ ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡಲಿಲ್ಲ. ವೇದಿಕೆಗೆ ಆಗಮಿಸಿದ ಸಿದ್ದರಾಮಯ್ಯ ಅವರ ಕೈಕುಲುಕಿ ಯಡಿಯೂರಪ್ಪ ಆಹ್ವಾನಿಸಿದರಾದರೂ ಇಬ್ಬರು ಪರಸ್ಪರ ಮಾತನಾಡುವ ಗೋಜಿಗೆ ಹೋಗಲಿಲ್ಲ. ವೇದಿಕೆಯಲ್ಲಿದ್ದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಅವರ ಹೆಗಲಮೇಲೆ ಕೈಹಾಕಿ ಏನೋ ಮಾತನಾಡಿ ನಕ್ಕಿದ್ದು ವಿಶೇಷವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link