ಸರ್ಕಾರಿ ನೌಕರರು ಜನಸಾಮಾನ್ಯರ ಸೇವಕರು : ರಮೇಶ್

ಮಿಡಿಗೇಶಿ

      ನ.29 ಮಧುಗಿರಿ ಪಟ್ಟಣದ ಶಿಶು ಅಭಿವೃದ್ದಿ ಇಲಾಖೆಯ ಸಭಾಂಗಣದಲ್ಲಿ ನ.29 ರಂದು ಬೆಳಗ್ಗೆ 12-00 ಗಂಟೆಯ ಸಮಯದಲ್ಲಿ ಭ್ರಷ್ಠಾಚಾರ ನಿಗ್ರಹದಳ ತುಮಕೂರು ಇಲಾಖೆಯವರು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸ್ಥಳದಲ್ಲೇ ಅರ್ಜಿ ಪಡೆದು ಸಂಭಂಧಿಸಿದ ಇಲಾಖೆಯ ಅಧಿಕಾರಿಗಳವರೊಡನೆ ಅರ್ಜಿದಾರರ ಸಮಸ್ಯೆಗಳ ಇತ್ಯರ್ಥವಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವುದು ಇಲ್ಲವೇ ದೂರುದಾರರು ನೀಡಿದ ಅರ್ಜಿಗೆ ಸಮಂಜಸ ತಿಳುವಳಿಕೆ ಮಾಡುವ ಉದ್ದೇಶ ಎ.ಸಿ.ಬಿ. ಇಲಾಖೆಯ ದ್ದಾಗಿರುತ್ತದೆ .

      ಹಾಗೂ ದೂರುದಾರರು ನೀಡುವ ಅರ್ಜಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸದರಿ ಇಲಾಖೆಯ ಅಧಿಕಾರಿಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎ.ಸಿ.ಬಿ. ಇನ್ಸ್ ಪೆಕ್ಟರ್ ರಮೇಶ್ ರವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಶಿಸ್ತು ಕ್ರಮ ಕೈಗೊಳ್ಳುತ್ತದೆ ಎ.ಸಿ.ಬಿ. ಎಂಬುದಕ್ಕೆ ಉದಾ:- ಕುಣಿಗಲ್ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿಯ ಮೇಲೆ ಈಗಾಗಲೇ ಪ್ರಕರಣದಾಖಲಾಗಿದ್ದು ಪ್ರಕರಣದ ವಿಚಾರಣೆ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.

      ಸದರಿ ಎ.ಸಿ.ಬಿ. ಇಲಾಖೆಯ ಸಾರ್ವಜನಿಕರ ಕುಂದು ಕೊರತೆಗಳ ಸಭೆಗೆ ಮಧುಗಿರಿ ತಾಲ್ಲೂಕಿನ ಬಹುತೇಕ ತಾಲ್ಲೂಕು ಮಟ್ಟದ ಅಧಿಕಾರಿಗಳವರು, ಇಲಾಖೆಗೆ ಸಂಭಂಧಿಸಿದ ಕೆಳವರ್ಗದ ಅಧಿಕಾರಿಗಳು ಗೈರಾಗಿರುವ ಬಗ್ಗೆ ಎಚ್ಚರಿಕೆ ನೀಡಿದರು. ಸದರಿ ಗೈರಾದ ಇಲಾಖೆಯ ಬಗ್ಗೆ ಸಂಭಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳವರ ಗಮನಕ್ಕೆ ತರುವುದಾಗಿ ತಿಳಿಸಿದರು.

     ನ. 28 ರಂದು ಕೊರಟಗೆರೆ ತಾ.ನ. ಬಿ.ಡಿ ಪುರ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹರೀಶ್ ಲಂಚ ಪಡೆಯುವಾಗ ಲಂಚದ ಹಣದ ಸಮೇತ ಬಂಧಿಸಿದ್ದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು. ತನಿಖೆ ಮುಂದುವರಿದಿರುವುದಾಗಿ ಸದರಿ ಹರೀಶ್‍ನು ಕಛೇರಿಯಲ್ಲಿನ ಸಿ.ಸಿ.ಕ್ಯಾಮರಾ ಇರುವುದನ್ನು ಗಮನಿಸದೆಯೇ ಲಂಚದ ಹಣ ಎಣಿಕೆ ಮಾಡಿಕೊಳ್ಳುತ್ತಿರುವ ದೃಷ್ಯ ಸೆರೆಯಾಗಿರುವುದಾಗಿ ತಿಳಿಸಿದರು. ಸದರಿ ಕಂಪ್ಯೂಟರ್ ಆಪರೇಟರ್ ಲಂಚದ ಹಣ ಪಡೆಯುವುದಲ್ಲದೆಯೇ (ಅರ್ಜಿದಾರರನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವ ಬಗ್ಗೆ ಸಾಕಷ್ಠು ದೂರುಗಳಿರುವುದಾಗಿ ತಿಳಿಸಿದರು.

    ಸರ್ಕಾರಿ ನೌಕರರು ಜನ ಸಾಮಾನ್ಯರ ಸೇವಕರು ಎಂಬುದನ್ನು ಮರೆಯಬಾರದೆಂದು ತಿಳಿಸಿದರು. ಎ.ಸಿ.ಬಿ. ಇಲಾಖೆಗೆ ಎಂಟು ಅರ್ಜಿಗಳು ಬಂದಿದ್ದು ಸಾಗುವಳಿದಾರರು ಸಾಗುವಳಿ ಬೇಡಿಕೆಗಳ ಬಗ್ಗೆ ತಹಶೀಲ್ದಾರ ಇಲಾಖೆಗೆ ಅಲಿನೇಷನ್ ಮಾಡಿಸಿಕೊಳ್ಳುವ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಗಳವರ ಇಲಾಖೆಗೆ ಮಧುಗಿರಿ ತಾ. ನ. ಮಿಡಿಗೇಶಿ ಹೋಬಳಿಯ ನಾಗಲಾಪುರ ಸರ್ಕಾರಿ ಗೋಮಾಳದ ಒತ್ತುವರಿ ಮಾಡಿಕೊಂಡು ಸರ್ಕಾರದ ಭೂಮಿಯನ್ನು ಕಬಳಿಸುತ್ತಿರುವರ ಬಗ್ಗೆ ಒತ್ತುವರಿ ದಾರರನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಎ.ಸಿ.ಬಿ. ರವರಿಗೆ ಲಿಖಿತ ದೂರನ್ನು ದಾಖಲೆ ಸಮೇತ ಗ್ರಾಮಸ್ಥರು ದೂರನ್ನು ನೀಡಿದರು.

      ಪ್ರತಿ ದೂರು ಇದೇ ಗ್ರಾಮದ ಚೌಡಮ್ಮ ರವರು ಸದರಿ ಗೋಮಾಳದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರ ಸಹೋದರ ಕೃಷ್ಣೇಗೌಡ ಸದರಿ ಗೋಮಾಳದ ಭೂಮಿಯ ಬಗ್ಗೆ ಲಿಖಿತ ದೂರನ್ನು ನೀಡಲು ಮುಂದಾಗಿದ್ದು ಎ.ಸಿ.ಬಿ. ಇನ್ಸ್ ಫೆಕ್ಟರ್ ರಮೇಶ್ ರವರು ಗ್ರಾಮಸ್ಥರೆಲ್ಲರೂ ಸರ್ಕಾರಿ ಗೋಮಾಳದ ಭೂಮಿಯ ಅರಣ್ಯದ ಉಳುವಿನ ಬಗ್ಗೆ ಒಮ್ಮತದಿಂದಿರುವಾಗ ನೀನು ಒಬ್ಬನೇ ಸರ್ಕಾರದ ಭೂಮಿಯನ್ನು ಕಬಳಿಸಲೆತ್ನಿಸುವುದು ಸರಿಯೇ? ಆದ್ದರಿಂದ ನೀನು ನೀಡುವಂತಹ ದೂರಿನ ಅರ್ಜಿಯನ್ನು ಸಂಭಂದಿಸಿ ರಕ್ಷಣಾ ಇಲಾಖೆಗೆ ದೂರು ನೀಡುವಂತೆ ಕೃಷ್ಣೇಗೌಡ ನೀಡಲು ತಂದಿದ್ದ ಅರ್ಜಿಯನ್ನು ತಿರಸ್ಕರಿಸಿದರು.

      ಕಳೆದ ಇಪ್ಪತ್ತು ವರ್ಷಗಳಿಂದ ವಿಧವಾ ವೇತನ ಪಡೆಯುತ್ತಿದ್ದ ಲಕ್ಷ್ಮಮ್ಮ ಕಂಸಾನಹಳ್ಳಿ ವೃದ್ದೆಗೆ ಕಳೆದ ಒಂದು ವರ್ಷದಿಂದ ವೃದಾಪ್ಯ ವೇತನ ಬಾರದಿರುವ ಬಗ್ಗೆ ಎ.ಸಿ.ಬಿ. ರಮೇಶ್ ರವರು ತಹಶೀಲ್ದಾರ ಕಛೇರಿಯ ಎಸ್.ಡಿ.ಎ. ವನಜಾಕ್ಷಮ್ಮರವರಿಗೆ ಸದರಿ ವೃದ್ದೆಗೆ ವಿಧವಾ ವೇತನ ಮಂಜೂರಾತಿ ಕೊಟ್ಟು ತದನಂತರ ಎ.ಸಿ.ಬಿ. ಇಲಾಖೆಗೆ ಮಾಹಿತಿ ಒದಗಿಸುವಂತೆ ಎಚ್ಚರಿಸಿದರು.

     ಮಧುಗಿರಿ ತಾ. ನ. ಸಹಾಯಕ ಕೃಷಿ ಅಧಿಕಾರಿ ಹನುಮಂತರಾಯಪ್ಪನವರು ಎ.ಸಿ.ಬಿ. ಇನ್ಸ್‍ಫೆಕ್ಟರ್ ರಮೇಶ್ ರವರಿಗೆ ಮೌಖಿಖವಾಗಿ ಇತ್ತೀಚಿನ ದಿನಗಳಲ್ಲಿ ಮಾಹಿತಿ ಹಕ್ಕುದಾರರ ಅರ್ಜಿಗಳ ಕಾಟ ಹೆಚ್ಚಾಗುತ್ತಿರುವುದರಿಂದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಢಕರವಾಗುತ್ತಿದೆ ಎಂಬುದಾಗಿ ತಿಳಿಸಿದರು ಸದರಿಯವ ಉತ್ತರಕ್ಕೆ ಎ.ಸಿ.ಬಿ. ರಮೇಶ್ ರವರು ಎಷ್ಠೇ ಜನ ಮಾಹಿತಿ ಹಕ್ಕುದಾರರ ಅರ್ಜಿಗಳು ಬಂದರೂ ತಮ್ಮ ತಮ್ಮ ಇಲಾಖೆಗಳಲ್ಲಿನ ನಿಖರಮಾಹಿತಿ ಒದಗಿಸುವಂತೆ ಮಾಹಿತಿ ಇಲ್ಲದೆ ಇದ್ದ ಪಕ್ಷದಲ್ಲಿ ಹಿಂಬರಹ ನೀಡುವಂತೆ ಎಚ್ಚರಿಸಿದರು.

       ಇಲಾಖೆಗಳಲ್ಲಿ ತಪ್ಪು ಮಾಡದೆ ಇರುವ ಅಧಿಕಾರಿಗಳವರು ಯಾರಿಗೂ ಎದರುವ ಅಗತ್ಯತೆ ಇರುವುದಿಲ್ಲ. ತಪ್ಪು ಮಾಡಿದ ಹಣದ ಬೇಡಿಕೆ ಇರುವ ಅಧಿಕಾರಿಗಳು ಎಲ್ಲಾ ಮಾಹಿತಿ ಹಕ್ಕುದಾರರಿಗೆ ಎದರಿಕೊಳ್ಳಲೇ ಬೇಕಾಗುತ್ತದೆ. ಉದ್ದೇಶ ಪೂರ್ವಕವಾಗಿ ಮಾಹಿತಿ ಹಕ್ಕುದಾರರು ಹೆದರಿಸಲು ಬೆದರಿಸಲು ಬಂದಾಗ ಸಂಭಂದಿಸಿ ಅಧಿಕಾರಿಗಳವರು ಎ.ಸಿ.ಬಿ ಇಲಾಖೆಗೆ ಲಿಖಿತ ದೂರನ್ನು ನೀಡುವಂತೆ ತಿಳಿಸಿದರು.

     ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದೊಡ್ಡ ಸಿದ್ದಪ್ಪ, ತಹಶೀಲ್ದಾರ ಕಛೇರಿಯ ಶಿರಸ್ತೇದಾರ್ ಶ್ರೀನಿವಾಸ ಕುಮಾರ್ ಎ.ಸಿ.ಬಿ. ಇಲಾಖೆಯ ಮುಖ್ಯ ಪೇದೆ ಮಹೇಶ್ ಕುಮಾರ್ ಸೇರಿದಂತೆ ಹಲವಾರು ಇಲಾಖೆಯ ನೌಕರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link