ಹಗರಿಬೊಮ್ಮನಹಳ್ಳಿ:
ರಾಜ್ಯದಲ್ಲಿ ರೈತರಿಗೆ ವಚನ ನೀಡಿದಂತೆ ನಡೆದುಕೊಳ್ಳದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದನಗೌಡ ಆರೋಪಿಸಿದರು.
ಅವರು, ಪಟ್ಟಣದ ತಾಲೂಕು ಕಚೇರಿಯ ಮುಂದೆ ಸೋಮವಾರ ಹಮ್ಮಿಕೊಂಡಿದ್ದ ರೈತ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಪೂರ್ಣ ಮಳೆಯಾಗದೆ ಹಿನ್ನೆಲೆಯಲ್ಲಿ, ತಾಲೂಕಿನ ರೈತರು ಪಂಪ್‍ಸೆಟ್ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ವಿದ್ಯುತ್ ಕಣ್ಣಮುಚ್ಚಾಲೆಯಿಂದ ರೈತರು ಕಂಗಲಾಗಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಾಜ್ಯಾಧ್ಯಕ್ಷ ಜೆ.ಎಂ.ವೀರಸಂಘಯ್ಯನವರ ನೇತೃತ್ವದಲ್ಲಿ ಇದೇ ಅ.6ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುದು. ಉದ್ದೇಶ ನಿರಂತರ ವಿದ್ಯುತ್ ನೀಡಬೇಕು. ತಾಲೂಕಿನ ರೈತರ ನಾನಾ ಬೇಡಿಕೆಗಳನ್ನು ಈಡೇರಿಸಬೇಕು, ಕಾರಣ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಾಗಿ ರೈತರು ಭಾಗವಹಿಸುವಂತೆ ಮನವಿಮಾಡಿಕೊಂಡರು.
ನಂತರ ಜಿಲ್ಲಾಧ್ಯಕ್ಷ ಬಿ.ಗೋಣಿಬಸಪ್ಪ ಮಾತನಾಡಿ, ಮಾತು ಕೊಟ್ಟಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿಲ್ಲ. ಆದ್ದರಿಂದ ರೈತರು ಆತ್ಮಹತ್ಯೆಯಂತ ಪ್ರಕರಣಗಳಿಗೆ ತುತ್ತಾಗುತ್ತಿರುವುದು ನಿಲ್ಲುತ್ತಿಲ್ಲವೆಂದ ಅವರು ಕೂಡಲೆ ರೈತರ ಸಾಲಮನ್ನಾ ಮಾಡುವ ಮೂಲಕ ಆತ್ಮಹತ್ಯೆಯಂತ ಪ್ರಕರಣಗಳನ್ನು ನಿಯಂತ್ರಿಸಿ .
ಬರಪರಿಹಾರವನ್ನು ಕೂಡ ಕೂಡಲೆ ವಿತರಣೆಮಾಡಬೇಕೆನ್ನುವ ಬೇಡಿಕೆ ಸೇರಿದಂತೆ, ತಾಲೂಕಿನ ನೀರಾವರಿ ಯೋಜನೆಗಳನ್ನು ಕೂಡಲೆ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಲಿರುವ ಈ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು ಎಂದರು. ಇದು 4ದಿನದ ಜಾಥವಾಗಿದ್ದು, ಹಗರಿಕ್ಯಾದಿಗಿಹಳ್ಳಿ, ಬಾಚಿಗೊಂಡನಹಳ್ಳಿ, ಉಪನಾಯಕನಹಳ್ಳಿ, ಅಡವಿಆನಂದದೇವನಹಳ್ಳಿ, ವರದಾಪುರ, ಲಡಕನಬಾವಿ, ಮಾಲವಿ, ಹರೆಗೊಂಡನಹಳ್ಳಿ, ನೆಲ್ಕುದ್ರಿ ಇನ್ನೂ ಅನೇಕ ಗ್ರಾಮಗಳಲ್ಲಿ ಜಾಥದ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಇದನ್ನು ಬೆಂಬಲಿಸಿ ಹತ್ತಿ ಅಡಿವೆಪ್ಪ ಮಾತನಾಡಿದರು. ತಾಲೂಕು ಘಟಕದ ಜೆ.ಎಂ.ರುದ್ರಮುನಿ, ಎಂ.ಸೋಮಣ್ಣ, ನೀಲಿರಾಜಸಾಬ್, ಕುರಿತಿಂದಪ್ಪ, ಕೆ.ಕೆ.ಬಿ.ಎಂ.ಗುರುಬಸಯ್ಯ, ಕಿತ್ನೂರು ನಾಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ