ಬೆಂಗಳೂರು
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪುತ್ರಿಯ ಕಳುವಾದ ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.
ನಗರದಲ್ಲಿ ವಾಸಿಸುತ್ತಿದ್ದ ಈಶ್ವರಪ್ಪ ಅವರ ಪುತ್ರಿ ಕೆ ಶಾಂತಾ ಅವರು ಮೊಬೈಲ್ ಕಳೆದು ಹೋಗಿರುವ ಬಗ್ಗೆ ಕಳೆದ ಸೆ.೧೩ ರಂದು ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ತನಿಖೆ ಕೈಗೊಂಡ ಈಶಾನ್ಯ ವಿಭಾಗ ಪೊಲೀಸರಿಗೆ ಬಾಗಲಕೋಟೆ ಬಳಿ ಮೊಬೈಲ್ ಇರುವ ಲೋಕೇಶನ್ ಪತ್ತೆಯಾಗಿದೆ.
ಕೂಡಲೇ ಬಾಗಲಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದು ಸಲ್ಲಿನ ಪೊಲೀಸರು ತನಿಖೆ ಕೈಗೊಂಡಾಗ ಶಾಂತಾ ಅವರ ಮೊಬೈಲ್ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟನೂರು ಗ್ರಾಮದಲ್ಲಿ ಇದೆ ಎಂದು ತಿಳಿದುಬಂದಿತ್ತು.ಮಾಹಿತಿ ಮೇರೆಗೆ ಆ ಗ್ರಾಮಕ್ಕೆ ಹೋದ ಪೊಲೀಸರು ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೋಯಿತು .ಎನ್ನುವುದು ಅನುಮಾನಕ್ಕೆ ಕಾರಣವಾಗಿದ್ದು ಬೆಂಗಳೂರಿಗೆ ಹೋಗಿದ್ದಾಗ ಮೊಬೈಲ್ ಸಿಕ್ಕಿರುವುದಾಗಿ ಲಕ್ಷ್ಮಣ ಬಂಡಿವಡ್ಡರ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








