ಕುಣಿಗಲ್
ಎಲ್ಲೆಡೆ ಭೀತಿಯುಂಟುಮಾಡಿರುವ ಕೊರೋನಾ ವೈರಸ್ ತಡೆಗಟ್ಟಲು ಪಟ್ಟಣದ ಸಂತೆ ಮೈದಾನದಲ್ಲಿ ಡಿ.ನಾಗರಾಜಯ್ಯ ಗ್ರಾಮೀಣಾಭಿವೃದ್ಧಿ ಸಂಘದವತಿಯಿಂದ ಕೊರೋನಾ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಟನಲ್ನನ್ನು ಜಿಲ್ಲಾ ಉತ್ಸುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಿದರು.
ನಂತರ ಸಚಿವರು ಸೇರಿದಂತೆ ಮಾಜಿ ಶಾಸಕ ಡಿ.ನಾಗರಾಜಯ್ಯ ತುರುವೇಕೆರೆ ಶಾಸಕ ಮಸಲೇಜಯರಾಮ್, ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್, ಎಸ್.ಪಿ. ಡಾ.ಕೋನ ವಂಶಿಕೃಷ್ಣ ಮತ್ತು ಜೆಡಿಎಸ್ ಮುಖಂಡರಾದ ಜಗದೀಶ್ನಾಗರಾಜಯ್ಯ ಸೇರಿದಂತೆ ವಿವಿಧ ಮುಖಂಡರು ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗದ ಮೂಲಕ ಹೊರಬಂದರು.
ಈ ಸಂದರ್ಭದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿಯವರು ಇದೊಂದು ಉತ್ತಮ ಜನಪರ ಕೆಲಸ ಇಡೀ ದೇಶಕ್ಕೆ ಆಪತ್ತು ಬಂದಂತಹ ಇಂತಹ ಸಂದರ್ಭದಲ್ಲಿ ಪಕ್ಷಾತೀತವಾಗಿ ಸೇವೆ ಮಾಡುವಂತಹ ಮನೋಬಾವವೇ ಮುಖ್ಯವಾಗಿದೆ ಇಂತಹ ಸೇವಾ ಮನೋಭಾವನೆ ಇಂದ ಇನ್ನೂ ಹೆಚ್ಚು ಸ್ವಯಂ ಸೇವಕರು ಮುಂದಾಗಿ ಸಾಮಾಜಿಕ ಕಳಕಳಿಯಿಂದ ಉತ್ತಮ ಉಚಿತ ಸೇವೆಯನ್ನು ಮಾಡುವರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸಂಬಂಧ ಪಟ್ಟ ಸರ್ಕಾರ ಹಾಗೂ ಅಲ್ಲಿನ ಅಧಿಕಾರಿವರ್ಗ ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನ ಸೇವೆ ಸಮಾಜದ ಜನರಿಗೆ ದೊರೆಯುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ