ಚಳ್ಳಕೆರೆ
ಸಂತೋಷ ಮತ್ತು ಸಂಭ್ರಮದಿಂದ ತನ್ನ ಬಂಧುವಿನ ಮದುವೆಗೆಂದು ಹೊರಟ ವ್ಯಕ್ತಿ ಮಾರ್ಗಮದ್ಯದಲ್ಲೇ ನಡೆದ ಬೈಕ್ ಅಪಘಾತದಲ್ಲಿ ತೀರ್ವವಾಗಿ ಪೆಟ್ಟುಬಿದ್ದು, ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟ ಘಟನೆ ಇಲ್ಲಿನ ಬೆಂಗಳೂರು ರಸ್ತೆಯ ಹೊಟ್ಟೆಪ್ಪನಹಳ್ಳಿ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿ ಕ್ರಾಸ್‍ನಲ್ಲಿ ಹೋಟೆಲ್ ವ್ಯವಹಾರ ಮಾಡುತ್ತಿರುವ ತಿಪ್ಪೇಸ್ವಾಮಿ(55) ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ತನ್ನ ಪತ್ನಿ ಲಕ್ಷ್ಮಿದೇವಿಯೊಂದಿಗೆ ಚಳ್ಳಕೆರೆ ನಗರದಿಂದ ಹೊಟ್ಟೆಪ್ಪನಹಳ್ಳಿ ಗೊಲ್ಲರಹಟ್ಟಿ ಸಂಬಂಧಿಯೊಬ್ಬರ ಮದುವೆಗೆ ಹೊರಟಿದ್ದ. ಹೊಟ್ಟೆಪ್ಪನಹಳ್ಳಿ ಕ್ರಾಸ್ ಬಳಿ ಎದುರಿಗೆ ಬಂದ ಮೋಟಾರ್ ಬೈಕ್ ಇವರ ಬೈಕ್‍ಗೆ ರಭಸವಾಗಿ ಡಿಕ್ಕಿಹೊಡೆದ ಪರಿಣಾಮವಾಗಿ ಬೈಕ್ ಸವಾರ ತಿಪ್ಪೇಸ್ವಾಮಿ ಪತ್ನಿಯೊಂದಿಗೆ ಕೆಳಕ್ಕೆ ಬಿದಿದ್ದಾನೆ.
ಎದುರಿನಿಂದ ಬಂದ ಮೋಟಾರ್ ಬೈಕ್ ಹೊಟ್ಟೆಪ್ಪನಹಳ್ಳಿ ಗೊಲ್ಲರಹಟ್ಟಿಯಿಂದ ಚಳ್ಳಕೆರೆಗೆ ಬರುತ್ತಿದ್ದು, ಮಂಜುನಾx(35) ಎಂಬುವವನ್ನು ಬೈಕ್ ಚಾಲನೆ ಮಾಡುತ್ತಿದ್ದು, ಬೈಕ್‍ಗೆ ಡಿಕ್ಕಿಹೊಡಿದ್ದಾನೆ. ಬೈಕ್ ಸವಾರ ಮಂಜುನಾಥನಿಗೂ ತೀರ್ವಪೆಟ್ಟು ಬಿದಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ಬೈಕ್ ಸವಾರ ಮಂಜುನಾಥ ಮತ್ತು ಬೈಕ್ ಅಪಘಾತದಲ್ಲಿ ಮೃತಪಟ್ಟ ತಿಪ್ಪೇಸ್ವಾಮಿ ಅಳಿಯ ಮತ್ತು ಮಾವ ಎಂದು ತಿಳಿದು ಬಂದಿದ್ದು, ಮಾವನ ಸಾವಿಗೆ ಅಳಿಯನೇ ಪರೋಕ್ಷವಾಗಿ ಕಾರಣವಾಗಿದ್ಧಾನೆ. ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ. ಬಂಧುಗಳ ಅಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







