ಬೆಂಗಳೂರು:
ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ಕೇರಳ ಹಾಗು ಇತರೆ ರಾಕ್ಯಗಳ ಹಲವು ಜನರಿಗೆ ಬಯಸದೇ ಬಂದ ಭಾಗ್ಯವಾಗಿದೆ. ಗಡಿ ಪ್ರದೇಶಗಳಲ್ಲಿ ನಾಲ್ಕು ದಶಕಗಳಿಂದ ಕೇರಳದ ಜನರು ಭೂಮಿ ಖರೀದಿಸುತ್ತಿದ್ದಾರೆ. ಈಗ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕೇರಳಿಗರಿಗೆ ಭೂಮಿ ಖರೀದಿಸುವುದಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಖರೀದಿ ಮತ್ತಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇರಳದಲ್ಲಿ ವಿದೇಶದ ಹಣ ಹೆಚ್ಚು ಹರಿಯುತ್ತಿದ್ದು, ಭೂಮಿಯ ಬೆಲೆ ಏರಿಕೆಯಾಗುತ್ತಿದೆ. ಆದರೆ ಕೇರಳಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡದಲ್ಲಿ ಭೂಮಿಯ ಬೆಲೆ ಕಡಿಮೆ ಇದ್ದು, ಈ ಕಾರಣದಿಂದಾಗಿ ಕೇರಳದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಭೂಮಿಯ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಕೇರಳದಲ್ಲಿ 10 ಸೆಂಟ್ಸ್ ಭೂಮಿಯನ್ನು ಮಾರಾಟ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೇ ಹಣದಿಂದ 1 ಎಕರೆಯಷ್ಟು ಭೂಮಿಯನ್ನು ಪಡೆಯಬಹುದಾಗಿದೆ.
ದಕ್ಷಿಣ ಕನ್ನಡದಲ್ಲಿ ಭೂಮಿ ಖರೀದಿಸುವ ಕೇರಳಿಗರ ಪೈಕಿ ಬಹುತೇಕ ಮಂದಿ ಅದನ್ನು ರಬ್ಬರ್ ಪ್ಲಾಂಟೇಷನ್ ನ್ನಾಗಿ ಅಥವಾ ಅಡಿಕೆ ತೋಟ, ತೆಂಗಿನ ತೋಟ, ಬಾಳೆ ಹಣ್ಣು ಬೆಳೆ ಬೆಳೆಯುವ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಇನ್ನು ಬೇರೆ ಬೇರೆ ಗಡಿಯಲ್ಲಿ ಜನ ಸೈಟ್ ಮತ್ತು ಇನ್ನು ಮುಂತಾದ ರಿಯಲ್ ಎಸ್ಟೇಟ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರಲ್ಲದೆ ಜಮೀನು ನೀಡಿದ ರೈತರನ್ನು ಅವರದ್ದೆ ಜಮೀನಲ್ಲಿ ಒಂದಿಷ್ಟು ಸಂಬಳ ೆಂದು ನೀಡಿ ರೈತ ಕೂಲಿ ಕಾರ್ಮಿಕರಾಗಿಯೋ ಅಥವಾ ಸೈಟುಗಳಾದಲ್ಲಿ ಗೇಟ್ ಬಳಿಯ ವಾಚ್ ಮೆನ್ ರೀತಿಯಲ್ಲಿಯೋ ನಿಯೋಜನೆ ಮಾಡಿಕೊಂಡು ದೊಡ್ಡ ಸಹಾಯ ಮಾಡಿರುವವರ ಹಾಗೆ ನಟಿಸುತ್ತಾರೆ .
ಆದರೆ ಪಾಪ ತಮ್ಮ ಜೀವನದ ಕಷ್ಟ ತಾಳಲಾರದೆ ತಾತನಕಾಲದಿಂದ ಅಥವಾ ಜೀವಮಾನದ ಕಷ್ಟವನ್ನು ಧಾರೆಯೆರೆದು ಮಾಡಿಕೊಂಡ ಜಮೀನನ್ನು ಆರು ಕಾಸಿಗೆ ಕೊಂಡು ಬಂದಷ್ಟು ಬರಲಿ ಎಂದು ಮೂರು ಕಾಸಿಗೆ ಮಾರುವಂತಹ ಪರಿಸ್ಥಿತಿಗೆ ರೈತರನ್ನು ಸರ್ಕಾರ ಒಂದೇ ಬಾರಿಗೆ ದೂಡಿದೆ.
ಈ ರೀತಿ ಕೊಳ್ಳುವವರು ಒಂದು ಕಡೆಯಾದರೆ ಇನ್ನು ಕೆಲವರು ಭೂಮಾಫಿಯಾ ಹೆಸರಿನಲ್ಲಿ ದೌರ್ಜನ್ಯ ಮಾಡಿ ಜಮೀನುಗಳನ್ನು ಬಲವಂತವಾಗಿ ಹೆದರಿಸಿ ಅಥವಾ ಜೀವಭಯವೊಡ್ಡಿಯೋ ಬರೆಸಿಕೊಂಡು ರೈತರನ್ನು ಹೊರ ಹಾಕುತ್ತಾರೆ. ಇಲ್ಲ ನಾನು ಬರೆದುಕೊಡುವುದಿಲ್ಲಾ ಎಂದೆಲ್ಲಾ ರಂಪಾಟ ಮಾಡಿದರೆ ರೈತರ ಪ್ರಾಣ ಹರಣಕ್ಕೂ ಹಿಂಜರಿಯುವುದಿಲ್ಲ.ಸರ್ಕಾರ ರೈತರು ಕಷ್ಟದಲ್ಲಿದ್ದಾಗ ಸ್ಪಂದಿಸದಿದ್ದರೂ ಪರವಾಗಿಲ್ಲ ಆದರೆ ಅವರ ಜೀವ ಜೊತೆ ಆಡವಾಡಬಾರದು ಅಲ್ಲವೇ , ರೈತ ಅತಿವೇಷ್ಠಿ ಅಥವಾ ಅನಾವೃಷ್ಠಯಿಂದ ಬೆಳೆ ಹಾನಿಯಾದಾಗ ಕಾರುಗಳು ಅಥವಾ ವಿಮಾನದಲ್ಲಿ ಬಂದು ಸಮೀಕ್ಷೆ ಮಾಡುತ್ತೇವೆ ಎಂದು ಬಂದು ಒಂದು ದಿನದ ಬೃಹನ್ನಾಟಕ ಮಾಡಿ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ಬೊಬ್ಬೆ ಹೊಡೆಯುತ್ತಾರೆ.
ನಾವು ರೈತರ ಅಭ್ಯುದಯಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುವ ಸರ್ಕಾರ ರೈತರ ಅಭಿವೃದ್ದಿಗಾಗಿ ಎನ್ನುವ ಮುಸುಕಿನಲ್ಲಿ ತಕ್ಕಮಟ್ಟಿಗೆ ಸ್ವತಂತ್ರವಾಗಿ ಬೆಳೆ ಬೆಳೆದುಕೊಂಡು ಬದುಕುತ್ತಿರುವವರನ್ನು ಮತ್ತೆ ಜೀವ ಕಿತ್ತು ತಿನ್ನುವ ಹಳೆಯ ಜಮೀನ್ದಾರಿಕೆಗೆ ತಳ್ಳುವ ಹುನ್ನಾರವನ್ನು ಭೂಸುಧಾರಣಾ ಕಾಯ್ದೆಯ ಮೂಲಕ ನಡೆಸುತ್ತಿರುವುದು ಖಂಡನೀಯವಾಗಿದೆ ಮತ್ತು ಅಧಿಕಾರ ಪಕ್ಷದವರು ಯಾರನ್ನಾದರೂ ಕೇಳಿದರೆ ಈ ಕಾಯ್ದೆಯಿಂದ ರೈತರ ಬದುಕು ಹಸನಾಗುತ್ತದೆ ಮತ್ತು ರೈತರು ಹಿಂದೆಂದೂ ಕಾಣದಂತಹ ಲಾಭ ಗಳಿಸುತ್ತಾರೆ ಎಂದು ಜನನಾಯಕರು ಬೊಬ್ಬೆ ಹೊಡೆಯುತ್ತಾರೆ.
ಈ ಕಾಯ್ದೆ ಒಂದು ಕಡೆಯಾದರೆ ಇನ್ನೊಂದು ಪಾಪ ರೈತರು ಇಷ್ಟು ದಿನ ತಾವು ಬೆಳೆದ ಬೆಳೆಗೆ ನಿಗದಿತ ಬೆಲೆ ಸಿಗುತ್ತದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು . ಆದರೆ ಸರ್ಕಾರ ನಾವು ನಿಮ್ಮನ್ನು ಚಂದ್ರನಲ್ಲಿಗೆ ಕರೆದು ಕೊಂಡು ಹೋಗುತ್ತೇವೆ ಎಂದು ಹೇಳಿ ಜಾರಿಗೆ ತಂದ ಕಾಯ್ದೆಯೇ ಎಪಿಎಂಸಿ ತಿದ್ದುಪಡಿ ಕಾಯ್ದೆ ಇನ್ನು ಇದನ್ನು ಯಾರಾದರೂ ನಗರ ಪ್ರದೇಶದವರು ಓದಿದರೆ ಅವರು ಹೇಳುವುದು ರೈತರಿಗಾಗಿ ದಲ್ಲಾಳಿ ಪದ್ದತಿ ರದ್ದತಿಗಾಗಿ ಈ ಕಾನೂನು ತರಲಾಗಿದೆ ಇದು ಒಳ್ಳೆಯದೇ ಅಲ್ಲವೆ ಎಂದು ಆದರೆ ನಿಜವಾಗಿಯೂ ಇದು ಎಪಿಎಂಸಿ ಎಂಬ ವ್ಯವಸ್ಥಿತ ಮತ್ತು ರೈತರ ೊಂದು ನಂಬಿಕೆ ಸಂಪೂರ್ಣ ವಿನಾದ ಭದ್ರ ಬುನಾದಿಯಾಗಿದೆ.
ಇಷ್ಟುದಿನ ಎಪಿಎಂಸಿಗಳು ಬೆಲೆ ನಿರ್ಧಾರಣೆ ವೇಳೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದವು ಮತ್ತು ರೈತರಿಗೆ ಒಂದು ರೀತಿಯ ನಂಬಿಕೆಯನ್ನು ಸೃಷ್ಟಿಸಿತ್ತು ನಾವು ಬೆಳೆದ ಬೆಳೆಗೆ ಲಾಭ ಬರದಿದ್ದರೂ ನಷ್ಟವಂತೂ ಆಗುವುದಿಲ್ಲಾ ಹಾಕಿದ ಬಂಡವಾಳ ಮತ್ತೆ ಬರುತ್ತದೆ ಎನ್ನುವಂತಿತ್ತು ಆದರೆ ಸರ್ಕಾರದ ಈ ಒಂದು ಕಾಯ್ದೆ ಎಪಿಎಂಸಿಯನ್ನು ರಬ್ಬರ್ ಸ್ಟಾಂಪ್ ಮಾಡುವ ಹುನ್ನಾರವಾಗಿದೆ .ಒಂದೊಂದೆ ಅಧಿಕಾರವನ್ನು ದಿನೇದಿನೆ ಕಿತ್ತುಕೊಂಡು ಕೊನೆಗೆ ಎಪಿಎಂಸಿ ಒಂದು ಪ್ರಯೋಜನಕ್ಕೆ ಬಾರದ ಅಂಗ ಅದು ಇದ್ದು ವ್ಯರ್ಥ ಆದ್ದರಿಂದ ಅದನ್ನು ಮುಚ್ಚಿಬಿಡೋಣ ಎನ್ನುವುದೆ ಈ ಕಾಯ್ದೆಯ ಮೂಲ ಉದ್ದೇಶವಾಗಿದೆ ಮತ್ತು ಕಾಯ್ದೆ ಪ್ರಕಾರ ರೈತರು ದೇಶದ ಯಾವುದೇ ರಾಜ್ಯಕ್ಕೆ ಆಗಲಿ ತಮ್ಮ ಬೆಳೆಯನ್ನು ಮಾರಬಹುದು ಎನ್ನುತ್ತಾರೆ ಅದು ಸಹ ಅವತ್ತಿನ ಬೆಲೆಗೆ ಅನುಗುಣವಾಗಿ ಎಂದು ಹೇಳುತ್ತಾರೆ.
ಆದರೆ ಇದರಿಂದದಾಗಿ ಸಂಘಟಿತವಾಗಿರುವ ರೈತರು ಹೆಚ್ಚಿನ ಹಣಕ್ಕೆ ಆಸೆ ಬಿದ್ದು ಸಂಘ ಪ್ರವೃತ್ತಿಯಿಂದ ಆಚೆ ಬಂದು ಹಾಳಾಗಲಿ ಎಂಬುದು . ಸದ್ಯ ಯಾವುದಾದರೂ ಒಂದು ಸಮಸ್ಯೆಯಾದರೆ ಸಂಘಟಿತವಾಗಿ ಹೋರಾಟ ಮತ್ತು ಸರಿಯಾದ ಬೆಲೆ ನಿಗದಿ ಸಮಯದಲ್ಲಿ ಈ ಸಂಘಟನೆಗಳ ಮಾತನ್ನು ಕೇಳುವುದರಿಂದ ಅವರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ವಲ್ಲದ ಮನಸ್ಸಿನಿಂದಲೆ ಒಪ್ಪುತ್ತಿದ್ದಾರೆ ಆದರೆ ಈ ಕಾಯ್ದೆಯಿಂದ ಬೆಲೆ ನಿರ್ಧಾರಣ ಅಧಿಕಾರ ಸಂಪೂರ್ಣ ಸರ್ಕಾರದ ಅಧೀನದಲ್ಲಿರುತ್ತದೆ ಇದರಿಂದ ನಾವು ಪೆಟ್ರೋಲ್ ಡೀಸಲ್ ಬೆಲೆಯಲ್ಲಿನ ಏರಿಳಿತವನ್ನು ಹೇಗೆ ದಿನವು ನೋಡುತ್ತೇವೆಯೋ ಅದೇ ರೀತಿ ಇನ್ನು ಮುಂದೆ ಪತ್ರಿಕೆಗಳಲ್ಲಿ ಇಂದಿನ ತರಕಾರಿ ಬೆಲೆಗಳು ಎಂಬ ಕಾಲಂ ಬಂದರೂ ಆಶ್ಚರ್ಯವಿಲ್ಲ.