ಎಂ ಎನ್ ಕೋಟೆ :
ಸರ್ಕಾರದ ಸೌವಲತ್ತುಗಳನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ. ಲಿಂಗಪ್ಪ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಸಾಕಷ್ವು ಕೆಲಸಗಳನ್ನು ಮಾಡಬಹುದು ಎಲ್ಲರು ಕೂಡ ಸರ್ಕಾರದ ಅನುದಾನವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಧಾನ ಮಂತ್ರಿ ಯೋಜನೆಯಲ್ಲಿ ಸಾಕಷ್ವು ಮನೆಗಳನ್ನು ಕೊಡುತ್ತಿದೆ. ರೈತರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಕೇಂದ್ರ ಸರ್ಕಾರದಿಂದ 2.50 ಸಾವಿರ ಹಣವನ್ನು ಸರ್ಕಾರ ಕೊಡುತ್ತಿದೆ. ಬಡ ರೈತರು ಸರ್ಕಾರದ ಅನುದಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ದೀನ್ ದಯ್ಯಾಳ್ ಯೋಜನೆಯಲ್ಲಿ ಮನೆಗಳಿಗೆ ವಿದ್ಯುತ್ ಇಲ್ಲ ಅಂತವರು ಪಂಚಾಯಿತಿಯಿಂದ ಪಟ್ಟಿಯನ್ನು ಕೊಟ್ಟರೆ ಅಂತಹ ಮನೆಗಳಿಗೆ ವಿದ್ಯುತ್ ನ್ನು ಅಳವಡಿಸಲಾಗುತ್ತದೆ. ಇಡಿ ದೇಶದಲ್ಲಿ 2020ಕ್ಕೆ ಯಾವ ಮನೆಯಲ್ಲೂ ಕೂಡ ಕಡ್ಡಾಯವಾಗಿ ವಿದ್ಯುತ್ ನ್ನು ಹೊಂದಿರಬೇಕು.. ಅಂತಹ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದು ರೈತರಿಗೆ ಸಹಕಾರಿಯಾಗಿದೆ. ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅದ್ಯಕ್ಷ ಜಯದೇವಪ್ಪ , ಉಪಾಧ್ಯಕ್ಷ ತ್ರಿವೇಣಿ ನಟರಾಜು, ಸಹಾಯಕ ನಿರ್ದೇಶಕ ಜಯಸಿಂಹ , ಅಂಗನವಾಡಿ ಮೇಲ್ಚಾಚಾರಕ ಹುಚ್ಚರಂಗಮ್ಮ , ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ , ಪರಮೇಶ್ , ಯತೀಶ್ , ಮಲ್ಲಿಕಾರ್ಜುನ್ , ನೀಲಮ್ಮ ಸಿದ್ದರಾಮೇಶ್ , ಉಮೇಶ್ , ಪಿಡಿಓ ಶಿವಸ್ವಾಮಿ , ಕಾರ್ಯದರ್ಶಿ ವೀರಪ್ಪ ಹಾಗೂ ಗ್ರಾಮಸ್ಥರು ಬಾಗವಹಿಸಿದ್ದರು.