ರಾಯಚೂರು
ರೇವಣ್ಣನವರು ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು. ಆ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸಚಿವರಾಗಿದ್ದು ರೇವಣ್ಣ ಅವರು ಸುಮಲತಾ ಬಗ್ಗೆ ಈ ರೀತಿ ಮಾತನಾಡಬಾರದಿತ್ತು. ಹೇಳಿಕೆ ಕುರಿತು ಖುದ್ದು ಸಿಎಂ ಕುಮಾರಸ್ವಾಮಿ ಕೂಡ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು ಎಂದಿದ್ದಾರೆ. ಆದರೆ, ರೇವಣ್ಣ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಬೇಸರತಂದಿದೆ ಎಂದರು.
ನಮ್ಮ ಪಕ್ಷ ಮಹಿಳೆಯರಿಗೆ ವಿಚಾರವಾಗಿ ಅಪಾರವಾದ ಗೌರವ ಹೊಂದಿದೆ ಎಂದ ವಿಶ್ವನಾಥ್, ರೇವಣ್ಣ ಈ ರೀತಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರವಾಗದೆ . ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.