ಮಧುಗಿರಿ :
ತಾತ ಮೊಮ್ಮಗನಿಗಾಗಿ ದಾನವಾಗಿ ನೀಡಿದ್ದ ಮನೆಯನ್ನು ತಂದೆ ಬಿಟ್ಟು ಕೊಡಲಿಲ್ಲಾ ಎಂದು ಆಸ್ತಿ ವಿಚಾರವಾಗಿ ತಂದೆಯನ್ನೇ ಹತ್ಯೆಗೈದಿದ್ದ, ಆರೋಪಿ ಪುತ್ರನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸಿದ್ದಾಪುರ ಗ್ರಾಮದ ಮಂಜುನಾಥ್ (60) ಎಂಬುವರು ಕೊಲೆಯಾದ ವ್ಯಕ್ತಿ. ಈತನ ಪುತ್ರ ನವೀನ್ ಕುಮಾರ್ (35) ಬಂಧಿತ ಆರೋಪಿಯಾಗಿದ್ದಾನೆ.
ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಣ್ಣನವರ ಜಮೀನಿನಲ್ಲಿ ಮಾ.2 ರಂದು ಈ ಘಟನೆ ನಡೆದಿದ್ದು, ಮಂಜುನಾಥ್‍ಗೆ ವಿಷಪೂರಿತ ಮದ್ಯವನ್ನು ಪುತ್ರನೇ ಕುಡಿಸಿ, ತಂದೆಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ತಂದೆ ಮತ್ತು ಮಗನ ನಡುವೆ ಆಸ್ತಿ ವಿಚಾರವಾಗಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು , ಈ ಬಗ್ಗೆ ಮಂಜುನಾಥ್ ತನ್ನ ಸಂಬಂಧಿಕರುಗಳಿಂದ ನ್ಯಾಯಾಲಯದಲ್ಲಿ ಆಸ್ತಿ ವಿಚಾರವಾಗಿ ದಾವೆ ಹಾಕಿಸಿದ್ದರು. ಕೊಟ್ಯಾಂತರ ರೂ ಬೆಲೆ ಬಾಳುವ ಆಸ್ತಿ ಇನ್ನೆಲ್ಲಿ ಕೈಬಿಟ್ಟು ಹೋಗುತ್ತದೆ ಎಂಬ ವಿಚಾರವಾಗಿ ಪುತ್ರ ನವೀನ್ ಕುಮಾರ್ ತಂದೆಯನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಈ ಮೊದಲು ಮೃತರ ಪತ್ನಿ ನೀಡಿದ ದೂರಿನ ಮೇಲೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು ಮರಣೋತ್ತರ ಪರೀಕ್ಷೆಯ ನಂತರ ಕೊಲೆ ಎಂದು ಧೃಡಪಟ್ಟ ಹಿನ್ನೆಲೆಯಲ್ಲಿ ಮಧುಗಿರಿ ಡಿವೈಎಸ್‍ಪಿ ಕೆ.ಜಿ.ರಾಮಕೃಷ್ಣ ರವರು ಕೈಗೊಂಡ ತನಿಖೆಯಿಂದಾಗಿ ಕೊಲೆ ಪ್ರಕರಣವೆಂದು ಬಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ