ಮಸ್ತಾನ್‌ ದರ್ಗಾಕ್ಕೂ ತೆರಳಲಿದೆ ಕರಗ: ಕರಗ ಸಮಿತಿ, ದರ್ಗಾ ಸಮಿತಿ ಸ್ಪಷ್ಟನೆ

ಬೆಂಗಳೂರು:  ‘ವಿಶ್ವ ವಿಖ್ಯಾತ ಕರಗ ಉತ್ಸವವು ಸಾಂಪ್ರದಾಯಿಕ ಮಾರ್ಗದಲ್ಲೇ ಸಾಗಲಿದೆ. ಪ್ರತಿಬಾರಿಯಂತೆ ಕಾಟನ್‌ಪೇಟೆಯಲ್ಲಿರುವ ತವಕ್ಕಲ್‌ ಮಸ್ತಾನ್‌ ದರ್ಗಾಕ್ಕೂ ಭೇಟಿ ನೀಡಲಿದೆ’ ಎಂದು ಕರಗ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ಕರಗ ಸಮಿತಿ, ಹಜ್ರತ್‌ ತವಕ್ಕಲ್‌ ಮಸ್ತಾನ್‌ ದರ್ಗಾ ಸಮಿತಿ, ನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಯವರು ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ‘ಕರಗವು ದರ್ಗಾಕ್ಕೆ ಭೇಟಿ ನೀಡುವುದು 300 ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ. ಅದು ಕೋಮು ಸಾಮರಸ್ಯದ ಸಂಕೇತ’ ಎಂದು ಆಯೋಜಕರು ತಿಳಿಸಿದರು. … Continue reading ಮಸ್ತಾನ್‌ ದರ್ಗಾಕ್ಕೂ ತೆರಳಲಿದೆ ಕರಗ: ಕರಗ ಸಮಿತಿ, ದರ್ಗಾ ಸಮಿತಿ ಸ್ಪಷ್ಟನೆ