ನವದೆಹಲಿ
ದೇಶದ ಆರ್ಥಿಕ ಸ್ಥಿತಿ ಸರಿಪಡಿಲಾಗದಷ್ಟು ಅಧೋಗತಿಗೆ ಇಳಿದಿರುವಾಗ ಮುಂದಿನ ಐದು ವರ್ಷದಲ್ಲಿ 5 ಟ್ರಿಲಿಯನ್ ಆರ್ಥಿಕತೆಯ ಗುರಿ ತಲುಪುಲು ಹಣ ಎಲ್ಲಿದೆ? ಇದು ಜನರು, ದೇಶವನ್ನು ದಾರಿತಪ್ಪಿಸುವ ಯತ್ನ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ದೇಶ ಐದು ವರ್ಷದಲ್ಲಿ ಟ್ರಿಲಿಯನ್ ಆರ್ಥಿಕ ಶಕ್ತಿಯಾಗಲಿದೆ ಎಂದು ಹೇಳಿರುವುದಕ್ಕೆ ಪಕ್ಷ ಸರಣಿ ಟ್ವೀಟ್ ಮೂಲಕವೇ ಸರಕಾರದ ನಡೆಯನ್ನು ಟೀಕಿಸಿದೆ.ಜನವರಿ -ಮಾರ್ಚ್ 2019 ರ ನಡುವಿನ ಜಿಡಿಪಿ ಬೆಳವಣಿಗೆ 5.8% ಕ್ಕಿಂತ ಕಡಿಮೆಯಾಗಿದೆ’ ಎಂದು ಒಟ್ಟು ತೆರಿಗೆ ಆದಾಯದ ಪ್ರಗತಿ 22.1% (ಏಪ್ರಿಲ್-ಜೂನ್ 2018) ರಿಂದ 1.4% ಕ್ಕೆ ಇಳಿದಿದೆ ಎಂದು ಹೇಳಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಪ್ರಸ್ತುತ ಇದೆ ಪರಿಸ್ಥಿತಿ ಮುಂದುವರಿದರೆ ಐದು ಟ್ರಿಲಿಯನ್ ಆರ್ಥಿಕತೆ ಸೃಷ್ಟಿಸುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ದೇಶದ ಜಿಡಿಪಿ ಮುಂದಿನ ಐದು ವರ್ಷಗಳವರೆಗೆ ಶೇಕಡ 9 ರಷ್ಟು ಬೆಳೆಯುವ ಅವಶ್ಯಕತೆಯಿದೆ ಎಂದು ಪಕ್ಷ ಪ್ರತಿಪಾದಿಸಿದೆ .
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನವನ್ನು ಕಾಂಗ್ರೆಸ್ ಟೀಕಿಸಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಒಂದು ದೇಶ, ಒಂದು ತೆರಿಗೆ ಆಡಳಿತವನ್ನು ಶ್ಲಾಘಿಸಿದ್ದಾರೆ. ಸರಿಯಾಗಿ ಅನುಷ್ಠಾನಗೊಳಿಸದೇ,ಅವಸರವಾಗಿ ಜಾರಿಗೆ ತಂದ ಕ್ರಮದಿಂದ ಅನೇಕ ಉದ್ಯಮಗಳು ನೆಲಕಚ್ಚಿ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದೂ ಪಕ್ಷ ದೂರಿದೆ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








