ಆತ್ಮಹತ್ಯಾ ಕೇಂದ್ರ ತಾಣವಾದ ದೆಹಲಿ ಮೆಟ್ರೋ ನಿಲ್ದಾಣ ..!!

ನವದೆಹಲಿ

     ದೆಹಲಿ ಮೆಟ್ರೋ ಆತ್ಮಹತ್ಯೆ ತಾಣವಾಗಿ ಪರಿವರ್ತನೆಯಾಗುತ್ತಿದೆಯೇ? ಈಗ ನಡೆಯುತ್ತಿರುವ ಘಟನೆಯನ್ನು ಆಧರಿಸಿ ಹೇಳುವುದಾದರೆ ನಿಜಕ್ಕೂ ಆತ್ಮಹತ್ಯೆ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂಬುದಕ್ಕೆ ಬಲವಾದ ಪುಷ್ಟಿ ಇದೆ.!.ಕಾರಣವಿಷ್ಟೆ ಕಳೆದ 17 ತಿಂಗಳ ಅವಧಿಯಲ್ಲಿ 25 ಆತ್ಮಹತ್ಯೆ ಯತ್ನ ಘಟನೆಗಳು ಜರುಗಿವೆ.

       ದೆಹಲಿ ಮೆಟ್ರೋ ನಿಲ್ದಾಣ ರಾಷ್ಟ್ರ ರಾಜಧಾನಿಯ ಆತ್ಮಹತ್ಯೆ ಕೇಂದ್ರವಾಗಿ ಬದಲಾಗುತ್ತಿವೆ ಎಂಬುದನ್ನುಅಂಕಿಅಂಶಗಳೇ ಸಾರಿ ಹೇಳುತ್ತಿವೆ!! ಜನವರಿ 2018 ಮತ್ತು ಮೇ 2019 ರ ನಡುವೆ ದೆಹಲಿ ಮೆಟ್ರೋದ ಹಳಿಗಳಲ್ಲಿ 25 ಜನರು ಆತ್ಮಹತ್ಯೆಗೆ ಪ್ರಯತ್ನಿಸಿ, ಈ ಪೈಕಿ ಕೆಲವರು ಜೀವ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚುತ್ತಲೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

       2014 ಮತ್ತು 2018 ರ ಅವಧಿಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ 80 ಆತ್ಮಹತ್ಯಾ ಯತ್ನ ನಡೆದಿವೆ ಎಂದು ಅಂಕಿ ಅಂಶಗಳು ಮೇಲಿಂದ ಮೇಲೆ ಸ್ಪಷ್ಟಪಡಿಸುತ್ತಿವೆ. ಹೆಚ್ಚಿನ ಘಟನೆಗಳು ನೀಲಿ ಮಾರ್ಗದಲ್ಲಿ ವರದಿಯಾಗಿರುವುದು ಕಂಡು ಬಂದಿದೆ.

       ಆತ್ಮಹತ್ಯೆ ಯತ್ನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಮೆಟ್ರೋದ ಕೆಲವು ಪ್ಲಾಟ್ಫಾರ್ಮ್ಗಳಲ್ಲಿ ಗಾಜಿನ ತಡೆಗೋಡೆಗಳನ್ನು ಸಹ ಸ್ಥಾಪಿಸಿದ್ದು, ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ತೆರೆಯುತ್ತದೆ ಆದರೆ ಎಲ್ಲಾ ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ಇನ್ನೂ ಸ್ಥಾಪನೆಯಾಗಿಲ್ಲ.ಕಳೆದ ಒಂದು ವಾರದಲ್ಲಿ ಎರಡು ಆತ್ಮಹತ್ಯೆಗಳ ಪ್ರಕರಣಗಳು ವರದಿಯಾಗಿವೆ. ಕಳೆದ ಮಂಗಳವಾರ 22 ವರ್ಷದ ಖಾಸಗಿ ಭದ್ರತಾ ಸಿಬ್ಬಂದಿ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

     ಜಂಡೆನ್ ವಾಲನ್ ನಿಲ್ದಾಣದಲ್ಲಿ 40 ವರ್ಷದ ಮಹಿಳೆ ಸೋಮವಾರ, ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇದೆಲ್ಲ ನೋಡಿದರೆ, ಗಮನಿಸಿದರೆ ಮೆಟ್ರೋ ನಿಲ್ದಾಣ ಆತ್ಮಹತ್ಯೆಯ ತಾಣವಾಗುತ್ತಿದೆ ಎಂಬದು ಸತ್ಯವಾಗಿ ಗೋಚರಿಸುತ್ತಿದೆ.!

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link