ಡಿ ಆರ್ ಡಿ ಓ ದಿಂದ ಬ್ರಹ್ಮೋಸ್ ಯಶಸ್ವಿ ಪ್ರಯೋಗ

ನವದೆಹಲಿ:

   ಡಿಆರ್ ಡಿಒ ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾದ ಬ್ರಹ್ಮೋಸ್ ನ ಸುಧಾರಿತ ಮಾದರಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ.

   ಬಾಲಾಸೋರ್ ನಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಇಂದು ಪರೀಕ್ಷೆ ಮಾಡಿದ್ದು, ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿ ಗುರಿ ಮುಟ್ಟಿದೆ ಎಂದು ಸಂಸ್ಥೆ ತಿಳಿಸಿದೆ . ಟಿಎಲ್‌ಸಿ ಮೂಲಕ ಉಡಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
   ಭೂ ದಾಳಿ ಮಾಡುವಲ್ಲಿ ಅತೀ ಹೆಚ್ಚು ಸಾಮರ್ಥ್ಯ ಹೊಂದಿರುವ ಈ ಬ್ರಹ್ಮೋಸ್ ಕ್ಷಿಪಣಿ ಸುಮಾರು 450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ನಿಖರತೆ ಹೊಂದಿದೆ. ಅಂತೆಯೇ ಆಗಸದಲ್ಲಿ ಗರಿಷ್ಠ ಎತ್ತರದವರೆಗೂ ಹಾರುವ ಸಾಮರ್ಥ್ಯ ಹೊಂದಿದೆ ಎಂಧು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  

 

   ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯೂ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವಂತೆ ನಿಯಂತ್ರಿಸಬಹುದಾಗಿದ್ದು ಇದಕ್ಕೂ ಮುಂಚೆ ಇದ್ದ ಕ್ಷಿಪಣಿ 290 ಕಿ.ಮೀ ದೂರ ಕ್ರಮಿಸಲು ಬಳಕೆ ಮಾಡುತ್ತಿದ್ದ ಅಷ್ಟೇ ಪ್ರಮಾಣದ ಇಂಧನವನ್ನು ಈ ಕ್ಷಿಪಣಿಯೂ ಬಳಕೆ ಮಾಡಿಕೊಂಡು 450 ಕಿ.ಮೀ ದೂರದ ಗುರಿಗಳನ್ನು ಯಶಸ್ವಿಯಾಗಿ  ಮುಟ್ಟುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಇಂಧನ ಬಳಕೆಯನ್ನು ಕಂಪ್ಯೂಟರ್ ಆಧಾರಿತ ಪ್ರೋಗ್ರಾಮ್ ನಿಂದ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಈ ಕ್ಷಿಪಣಿ ಸುಮಾರು 200 ರಿಂದ 300 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯು ಸಾಮರ್ಥ್ಯ ಹೊಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link