ನವದೆಹಲಿ:
ಭಾರತೀಯ ಕೋಸ್ಟ್ ಗಾರ್ಡ್ ರೂ .300 ಕೋಟಿ ಮೌಲ್ಯದ ಕೆಟಮೈನ್ ಮಾದಕ ಪದಾರ್ಥವನ್ನು ಮ್ಯಾನ್ಮಾರ್ ಗೆ ಸೇರಿದ ಹಡಗಿನಿಂದ ವಶ ಪಡಿಸಿಕೊಂಡಿದದ್ದಾರೆ ಎಂದು ತಿಳಿದು ಬಂದಿದೆ.ಕೋಸ್ಟ್ ಗಾರ್ಡ್ ದೋನಿಗಳು ಕಾರ್ ನಿಕೋಬಾರ್ ದ್ವೀಪಗಳ ಸಮೀಪದಲ್ಲಿ ಹಡಗನ್ನು ವಶಕ್ಕೆ ಪಡೆದಿದ್ದಾರೆ.
ಹಡಗಿನಲ್ಲಿ ಶೋಧ ಕಾರ್ಯ ನಡೆಸಿದಾಗ, ದೋಣಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಸುಮಾರು 57 ಅನುಮಾನಾಸ್ಪದ ಪೊಟ್ಟಣಗಳು ಹಡಗಿನಲ್ಲಿ ಪತ್ತೆಯಾಗಿದ್ದವು ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ನಂತರ ಗೋಣಿ ಚೀಲಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ವರ್ಗಾಯಿಸಿ ಅವರ ಹಡಗನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಸ್ಥಳೀಯ ಪೊಲೀಸರ ಜಂಟಿ ತನಿಖೆಯಲ್ಲಿ, ಗೋಣಿ ಚೀಲಗಳಲ್ಲಿ ಕೆಟಮೈನ್, ಸೈಕೋ ಟ್ರೋಫಿಕ್ ಇದ್ದು ಅದು ಸರಿ ಸುಮಾರು 1 ಕೆಜಿಯ 1,160 ಪ್ಯಾಕೆಟ್‌ಗಳು ತಲಾ ರೂ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 300 ಕೋಟಿ ರೂ ದಾಟುತ್ತದೆ ಎಂದು ನೌಕಾಪಡೆ ತಿಳಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








