ಜಮ್ಮು:
ಸದ್ಯಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿರುವ ಪ್ರತೀಯೊಬ್ಬ ಕಾಶ್ಮೀರಿ ನಾಯಕರನ್ನು ಸೂಕ್ತ ವಿಶ್ಲೇಷಣೆ ನೀಡಿದ ಬಳಿಕವಷ್ಟೆ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಮಂಡಳಿ ತಿಳಿಸಿದೆ .ಜಮ್ಮು ಮತ್ತು ಕಾಶ್ಮೀರದ ನಾಯಕರನ್ನು ವಶಕ್ಕೆ ಪಡೆದುಕೊಂಡಿರುವ ಕುರಿತ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಫಾರೂಖ್ ಖಾನ್ ಅವರು, ಭರವಸೆ ಇಡಿ, ಸೂಕ್ತ ವಿಶ್ಲೇಷಣೆಗಳ ಬಳಿಕ ಒಬ್ಬರ ನಂತರ ಒಬ್ಬರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಷ್ಟೆ ಕಣಿವೆ ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು ಮತ್ತು ಕಳೆದ 2 ತಿಂಗಳಿಗೂ ಹೆಚ್ಚು ಕಾಲದಿಂದಲೂ ನಮ್ಮ ಮೇಲೆ ಆಡಳಿತ ಮಂಡಳಿ ನಿಷೇಧ ಹೇರಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಮ್ಮು ವಿಭಾಗೀಯ ಆಯುಕ್ತ ಸಂಜೀವ್ ವರ್ಮಾ ಅವರು, ಈ ನಾಯಕರನ್ನು ಎಂದಿಗೂ ವಶಕ್ಕೇ ಪಡೆದುಕೊಂಡಿಲ್ಲ. ಹಾಗೆಂದು ಅವರನ್ನು ರಾಜಕೀಯ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಿಕೊಳ್ಳಲು ಬಿಟ್ಟಿಲ್ಲ. ಅವರಿಗೆ ಯಾವುದೇ ರೀತಿಯ ಅಡ್ಡಿಯುಂಟು ಮಾಡಿಲ್ಲ. ಸ್ವಯಂ ಹೇರಿಕೆಯ ನಿರ್ಬಂಧವನ್ನು ಅನುಭವಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/YS-AMNISTY-INT-ON-KASHMIR-P.gif)