ಭಾರತದ ನಾಲ್ವರು ಪತ್ರಕರ್ತರಿಗೆ ಪುಲಿಟ್ಜರ್ 2022 ಪ್ರಶಸ್ತಿ

ವಾಷಿಂಗ್ಟನ್, ಮೇ 10 ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ. ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. … Continue reading ಭಾರತದ ನಾಲ್ವರು ಪತ್ರಕರ್ತರಿಗೆ ಪುಲಿಟ್ಜರ್ 2022 ಪ್ರಶಸ್ತಿ