ರಷ್ಯಾದಿಂದ ಇಂಧನ ಖರೀದಿಸುವ ಭಾರತದ ನಿರ್ಧಾರವನ್ನು ಗೌರವಿಸುತ್ತೇವೆ: ಬ್ರಿಟನ್‌

ನವದೆಹಲಿ:  ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ಭಾರತಕ್ಕೆ ಹೇಳುವುದಿಲ್ಲ ಎಂದು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರುಸ್ ಹೇಳಿದ್ದಾರೆ.ಟ್ರುಸ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನವದೆಹಲಿಯಲ್ಲಿ ಗುರುವಾರ ಮಾತುಕತೆ ನಡೆಸಿದರು. ಬಳಿಕ ಮಾತನಾಡಿರುವ ಅವರು, ‘ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ಬೇರೆ ದೇಶಗಳು ಕೈಗೊಳ್ಳುವ ನಿರ್ಧಾರಗಳನ್ನು ಗೌರವಿಸುವುದು ತುಂಬಾ ಮುಖ್ಯವೆಂದು ಭಾವಿಸುತ್ತೇನೆ. ಭಾರತ ಸಾರ್ವಭೌಮ ರಾಷ್ಟ್ರ. ಭಾರತ ಏನು ಮಾಡಬೇಕು ಎಂಬುದನ್ನು ನಾವು ಹೇಳಲಾಗದು’ ಎಂದಿದ್ದಾರೆ. ಉಕ್ರೇನ್‌ … Continue reading ರಷ್ಯಾದಿಂದ ಇಂಧನ ಖರೀದಿಸುವ ಭಾರತದ ನಿರ್ಧಾರವನ್ನು ಗೌರವಿಸುತ್ತೇವೆ: ಬ್ರಿಟನ್‌