ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ

ಕಿಯೇವ್​/ಮಾಸ್ಕೋ:  ಪೂರ್ವ ಯೂಕ್ರೇನ್​ನ ಲುಹಾನ್​ಸ್ಕ್​ ಪ್ರಾಂತ್ಯದ ಬಿಲೋಹೊರಿವ್ಕಾ ಎಂಬಲ್ಲಿನ ಶಾಲೆಯ ಮೇಲೆ ರಷ್ಯಾ ಸೇನೆ ನಡೆಸಿದ ಬಾಂಬ್​ ದಾಳಿಗೆ ಮಕ್ಕಳು ಸೇರಿ 60 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಸ್ಥಳದಿಂದ ಪಾರುಮಾಡಲಾಗಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್​ ಸೆರ್​ಹಿಯ್​ ಗೈಡಾಯ್​ ಭಾನುವಾರ ತಿಳಿಸಿದ್ದಾರೆ. ಶಾಲೆಯನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿ ಮಕ್ಕಳು ಸೇರಿ 90ಕ್ಕೂ ಹೆಚ್ಚು ಜನ ಆಶ್ರಯ ಪಡೆದುಕೊಂಡಿದ್ದರು. ಭಾನುವಾರ ಅಪರಾಹ್ನ ರಷ್ಯಾ ಸೇನೆ ಈ ಶಾಲೆಯ ಮೇಲೆ ಬಾಂಬ್​ … Continue reading ಯೂಕ್ರೇನ್​ ಶಾಲೆ ಮೇಲೆ ರಷ್ಯಾ ಬಾಂಬ್​: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ