ಯಾವುದೋ ನಿರ್ಜನ ಪ್ರದೇಶದಲ್ಲಿ ಸಹಾಯಕ್ಕಾಗಿ ಇಲ್ಲವೇ, ಯಾರೊಂದಿಗೊ ಮಾತನಾಡಲು ಬಯಸಿದ ಸಂದರ್ಭದಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕವೇ ಲ್ಯಾಂಡ್ ಲೈನ್‌ಗೆ ಮತ್ತು ಮೊಬೈಲ್ ಗೆ ಕರೆ ಮಾಡುವ ಅವಕಾಶ ಶೀಘ್ರವೇ ಲಭ್ಯವಾಗಲಿದೆ. ನೆಟ್ ವರ್ಕ್ ಇಲ್ಲದಿರುವ ಪ್ರದೇಶದಲ್ಲಿಯೂ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಸಿ ಲ್ಯಾಂಡ್ ಲೈನ್, ಮೊಬೈಲ್ ಗಳಿಗೆ ಕರೆಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎನ್ನಲಾಗಿದ್ದು, ಶೀಘ್ರವೇ ಈ ಸೇವೆಯೂ ಬಳಕೆಗೆ ದೊರೆಯಲಿದೆ.
ಟೆಲಿಪೋನಿ:
ಟೆಲಿಫೋನಿ ಪರವಾನಗಿ ಪಡೆದಿರುವ ಟೆಲಿಕಾಂ ಕಂಪನಿ ಅಥವಾ ಖಾಸಗಿ ಕಂಪನಿಗಳು ಗ್ರಾಹಕರಿಗೆ ಹೊಸದಾಗಿ ಫೋನ್ ನಂಬರ್ ನೀಡುತ್ತವೆ. ಇದಕ್ಕೆ ಸಿಮ್ ಅವಶ್ಯಕತೆ ಇರುವುದಿಲ್ಲ. ಇಂಟರ್ ನೆಟ್ ಟೆಲಿಫೋನಿ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ನಂಬರ್ ಅನ್ನು ಆಕ್ಟೀವ್ ಮಾಡಬಹುದಾಗಿದೆ. ಅದರ ಮೂಲಕ ಕರೆ ಮಾಡಬಹುದಾಗಿದೆ.
ಮಾರುಕಟ್ಟೆಗೆ:
Wi-Fi ಬ್ರಾಡ್ ಬ್ಯಾಂಡ್ ಕನೆಕ್ಟ್ ಆಗಿ ಕರೆಗಳನ್ನು ಮಾಡಬಹುದಾದ ಇಂಟರ್ ನೆಟ್ ಟೆಲಿಫೋನಿ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸುವಂತೆ ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಸರ್ಕಾರ ಅಸ್ತು ಎಂದಿದೆ. ಶೀಘ್ರವೇ ಬಳಕೆಗೆ ಮುಕ್ತವಾಗಲಿದೆ.
ಜಿಯೋ -ಏರ್‌ಟೆಲ್: 
ರಿಲಯನ್ಸ್ ಜಿಯೋ, BSNL, ಏರ್‌ಟೆಲ್ ಹಾಗೂ ಇನ್ನಿತರ ಟೆಲಿಕಾಂ ಕಂಪನಿಗಳು ಹೊಸದಾಗಿ ಇಂಟರ್ ನೆಟ್ ಟೆಲಿಫೋನಿ ಸೇವೆಯನ್ನು ಒದಗಿಸಲಿವೆ ಎನ್ನಲಾಗಿದೆ. ಆಪ್ ಬೇಕು: ಹೊಸ ವ್ಯವಸ್ಥೆಯನ್ನು ಬಳಸಲು ಟೆಲಿಕಾಂ ಕಂಪನಿ ತಯಾರಿಸಿದ ಇಂಟರ್ ನೆಟ್ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಳಕೆದಾರನಿಗೆ 10 ಸಂಖ್ಯೆಗಳ ಹೊಸ ನಂಬರ್ ಸಿಗುತ್ತದೆ. ಇದರ ಮೂಲಕ ಕರೆ ಮಾಡಬಹುದಾಗಿದೆ.
ಹಳೇ ನಂಬರ್:
ಏರ್‌ಟೆಲ್ ಸಿಮ್ ಬಳಸುತ್ತಿದ್ದರೆ ಏರ್‌ಟೆಲ್ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಕೆ ಮಾಡಿಕೊಂಡರೆ ಹೊಸ ನಂಬರ್ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಏರ್‌ಟೆಲ್ ಸಿಮ್ ಬಳಕೆ ಮಾಡಿಕೊಂಡು ಜಿಯೋ ಇಂಟರ್ ನೆಟ್ ಟೆಲಿಫೋನಿ ಆಪ್ ಬಳಕೆ ಮಾಡಿಕೊಂಡರೆ ಹೊಸದಾಗಿ ನಂಬರ್ ಪಡೆಯಬೇಕಾಗಿದೆ.
ಡೇಟಾಗೆ ಮಾತ್ರ ದರ:
ಈ ಸೇವೆಯನ್ನು ಪಡೆದುಕೊಂಡ ಸಂದರ್ಭದಲ್ಲಿ ಬಳಕೆದಾರರಿಗೆ ಡೇಟಾದರ ಮಾತ್ರವೇ ವಿಧಿಸಲಾಗುವುದು. ಇದರಿಂದಾಗಿ ಕರೆಗಳಿಗೆ ಯಾವುದೇ ದರವೂ ಇರುವುದಿಲ್ಲ, ಸಂಪೂರ್ಣ ಉಚಿತವಾಗಿರಲಿದೆ. ಕಾಲ್‌ಡ್ರಾಪ್ ಸಮಸ್ಯೆಯೇ ಇರುವುದಿಲ್ಲ. ಇದಲ್ಲದೇ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಅಗುತ್ತಿರುವ ಕಾಲ್ ಡ್ರಾಪ್ ಸಮಸ್ಯೆಗೆ ಇಂಟರ್ ನೆಟ್ ಟೆಲಿಫೋನಿ ಪರಿಹಾರವನ್ನು ನೀಡಲಿದೆ ಎನ್ನಲಾಗಿದ್ದು, ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
