ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರ್ಸೆಂಟೇಜ್ ಜನಕ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಪರ್ಸೆಂಟೇಜು ಪದ್ಧತಿ ಹುಟ್ಟು ಹಾಕಿದ ಮಹಾನುಭಾವರು ಎಂದು ಛೇಡಿಸಿದ ಅವರು, ನಿಜವಾದ ಲೂಟಿಕೋರರು ಎಂದರೆ, ಬಿಜೆಪಿಯವರು ಎಂದು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ವಾಗ್ದಾಳಿ ನಡೆಸಿದ ಅವರು, ನಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಹೇಳಿ ನೀವೇ ಜೈಲಿಗೆ ಹೋಗಿದ್ದೀರಿ, ಇನ್ನು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದೀರಾ, ನೀವು ಗಾಜಿನ ಮನೆಯಲ್ಲಿರುವುದು ಎಂಬುದು ನೆನಪಿರಲಿ. ವಯಸ್ಸಿಗೆ ತಕ್ಕ ಹಾಗೆ ನೀವು ಮಾತನಾಡುವುದನ್ನು ಕಲಿಯಿರಿ. ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ಹಿಡಿತವಿರಲಿ ಎಂದು ಗುಟುರು ಹಾಕಿದರು.
ನಾಗಮಂಗಲ ಶಾಸಕ ಸುರೇಶ್‍ಗೌಡ ಅವರೊಂದಿಗೆ ಬೌರಿಂಗ್ ಇನ್ಸಿಟ್ಯೂಟ್‍ನಲ್ಲಿ ಸಭೆ ನಡೆಸಿರುವುದು ಸೇರಿದಂತೆ ನನಗೆ ಎಲ್ಲಾ ಮಾಹಿತಿ ಬರುತ್ತಿದೆ, ಹದಿನೆಂಟು ಶಾಸಕರನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ದಿದ್ದಾರೆ. ನಂತರ ವಿಧಾನಸೌಧಕ್ಕೆ ಭದ್ರತಾ ಸಿಬ್ಬಂದಿಯೊಂದಿಗೆ ಕರೆತರಲಾಗುವುದು ಎಂಬ ಮಾಹಿತಿಯೂ ನನಗೆ ಇಂಚಿಂಚು ಮಾಹಿತಿ ಇದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ